Momos: ಪನೀರ್​ ಮೋಮೋಸ್; ಸರಳ ವಿಧಾನದಲ್ಲಿ ಮನೆಯಲ್ಲೇ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jul 16, 2021 | 7:42 AM

ಮೋಮೋಸ್​ ಅನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೋಮೋಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ಮೋಮೋಸ್​​ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಮೋಮೋಸ್​ ಅನ್ನು 20 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೋಮೋಸ್ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಪನೀರ್​ ಮೋಮೋಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು, ಹೂ ಕೋಸು, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕ್ಯಾರೆಟ್, ಪನ್ನೀರ್, ಸ್ವೀಟ್​ ಕಾರ್ನ್, ಅಡುಗೆ ಎಣ್ಣೆ, ಕ್ಯಾಪ್ಸಿಕಮ್, ಡಸ್ಟಿಂಗ್​ ಪೌಡರ್​, ಗರಂ ಮಸಾಲಾ, ಕರಿ ಮೆಣಸಿನ ಪುಡಿ, ಉಪ್ಪು.

ಪನೀರ್​ ಮೋಮೋಸ್ ಮಾಡುವ ವಿಧಾನ:
ಮೊದಲು ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಹೂ ಕೋಸು, ಕ್ಯಾರೆಟ್, ಕ್ಯಾಪ್ಸಿಕಮ್, ಸ್ವೀಟ್​ ಕಾರ್ನ್, ಕರಿ ಮೆಣಸಿನ ಪುಡಿ, ಪನ್ನೀರ್, ಗರಂ ಮಸಾಲಾ, ಉಪ್ಪು ಹಾಕಿ ಫ್ರೈ ಮಾಡಿ ಇಟ್ಟುಕೊಳ್ಳಿ. ಬಳಿಕ ಡಸ್ಟಿಂಗ್​ ಪೌಡರ್​ ಹಾಕಿ ಮೈದಾ ಹಿಟ್ಟನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ, ನಂತರ ಅದನ್ನು ತಟ್ಟಿ ಮಧ್ಯದಲ್ಲಿ ತಯಾರಿಸಿದ ಮಿಶ್ರಣವನ್ನು ಹಾಕಿ ಮುಚ್ಚಿ, ಇಡ್ಲಿ ಪಾತ್ರೆಗೆ ಹಾಕಿ 15 ನಿಮಿಷ ಬೇಯಿಸಿಕೊಳ್ಳಿ. ಈಗ ರುಚಿಕರವಾದ ಪನೀರ್​ ಮೋಮೋಸ್ ಸವಿಯಲು ಸಿದ್ಧ.

ಇದನ್ನೂ ಓದಿ:
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Pizza: ಮನೆಯಲ್ಲಿ ಪಿಜ್ಜಾ ಮಾಡುವುದು ಕಷ್ಟ ಅಂತೀರಾ, ಸರಳ ವಿಧಾನದ ಜತೆ ಮಾಡಿ ಸವಿಯಿರಿ