ಬೊಮ್ಮಾಯಿಯಂಥ ದೂರದೃಷ್ಟಿಯುಳ್ಳ ಮುಖ್ಯಮಂತ್ರಿಯನ್ನು ಹಿಂದೆಂದೂ ನೋಡಿಲ್ಲ: ಸುನಿಲ್ ಕುಮಾರ್, ಸಚಿವರು
ಅದ್ಭುತವಾದ ಬಜೆಟ್ ಮಂಡಿಸಿರುವ ಬೊಮ್ಮಾಯಿ ಅವರು ಕೇವಲ 3 ತಿಂಗಳ ಅವಧಿಯಲ್ಲೇ ಅದರಲ್ಲಿ ಮಾಡಿದ 180 ಘೋಷಣೆಗಳ ಪೈಕಿ 160 ಘೋಷಣೆಗಳಿಗೆ ಆದೇಶಗಳನ್ನು ಹೊರಡಿಸಿದ್ದಾರೆ. ಇಷ್ಟು ವೇಗವಾಗಿ ಕೆಲಸ ಮಾಡುವ ಮುಖ್ಯಮಂತ್ರಿ ಯಾರಿದ್ದಾರೆ? ಎಂದು ಸಚಿವರು ಕೇಳಿದರು.
ದಾವಣಗೆರೆ: ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ತಮಗೆ ಮುಖ್ಯಮಂತ್ರಿ ಸ್ಥಾನ ಬೇಕಾದರೆ ರೂ. 2,500 ಕೋಟಿ ನೀಡಬೇಕು ಅಂತ ಕೇಳಲಾಗಿತ್ತು ಅಂತ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅದರೆ 4 ಬಾರಿ ಶಾಸಕನಾಗಿ ಆಯ್ಕೆಯಾಗಿರುವ ತಮಗೆ ಯಾರೂ ಹಣ ಕೇಳಿಲ್ಲ ಎಂದು ಇಂಧನ ಸಚಿವ ಸುನಿಲ ಕುಮಾರ (Sunil Kumar) ಶನಿವಾರ ದಾವಣಗೆರೆಯಲ್ಲಿ (Davanagere) ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವರು, ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಪಕ್ಷವೇ ಹಣ ನೀಡಿದೆ, ಕಾರ್ಯಕರ್ತರು ನನ್ನನ್ನು ಗೆಲ್ಲಿಸಿದ್ದಾರೆ. ಒಟ್ಟು 5 ಬಾರಿ ಚುನಾವಣೆಗೆ ನಿಂತಿದ್ದೇನೆ. ನಾನ್ಯಾವತ್ತೂ ಹಣ ಯಾರಿಗೂ ನೀಡಿಲ್ಲ, ನಮ್ಮ ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆ ಇದೆ, ಹಣಕ್ಕಲ್ಲ ಎಂದರು.
ತಮ್ಮ ಪಕ್ಷವು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲಿದೆ ಎಂದ ಸುನಿಲ್, ಅವರಂಥ ದೂರದೃಷ್ಟಿಯುಳ್ಳ ಮುಖ್ಯಮಂತ್ರಿಯನ್ನು ತಾವು ನೋಡಿಲ್ಲ ಎಂದರು. ಅದ್ಭುತವಾದ ಬಜೆಟ್ ಮಂಡಿಸಿರುವ ಬೊಮ್ಮಾಯಿ ಅವರು ಕೇವಲ 3 ತಿಂಗಳ ಅವಧಿಯಲ್ಲೇ ಅದರಲ್ಲಿ ಮಾಡಿದ 180 ಘೋಷಣೆಗಳ ಪೈಕಿ 160 ಘೋಷಣೆಗಳಿಗೆ ಅದೇಶಗಳನ್ನು ಹೊರಡಿಸಿದ್ದಾರೆ. ಇಷ್ಟು ವೇಗವಾಗಿ ಕೆಲಸ ಮಾಡುವ ಮುಖ್ಯಮಂತ್ರಿ ಯಾರಿದ್ದಾರೆ? ಬಜೆಟ್ ಮಂಡಿಸಿದ ಬಳಿಕ ಮುಂದಿನ ಬಜೆಟ್ ವರೆಗೆ ಆದೇಶಗಳನ್ನೇ ಹೊರಡಿಸದ ಸರ್ಕಾರಗಳನ್ನೂ ತಾವು ನೋಡಿರುವುದಾಗಿ ಸುನಿಕ್ ಕುಮಾರ ಹೇಳಿದರು.
ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡಿದ ಅವರು ಅದೀಗ ನಾಯಕರೇ ಇಲ್ಲದ ಅನಾಥ ಪಕ್ಷವಾಗಿದೆ. ಅದರ ಉಸ್ತುವಾರಿಗಳು ದೆಹಲಿಯಲ್ಲಿ ಶನಿವಾರ ಹೇಗೆ ನಡೆದುಕೊಂಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಪಕ್ಷದ ಜೊತೆ ಅದರ ನಾಯಕರೂ ಅನಾಥರಾಗಿದ್ದಾರೆ ಎಂದು ಹೇಳಿದರು. ಇಂದು ಜನರಿಗೆ ಯಾವುದಾದರೂ ಪಕ್ಷದ ಮೇಲೆ ಭರವಸೆ ಇದೆ ಅಂತಾದರೆ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೇಲೆ ಮಾತ್ರ ಅಂತ ಸುನೀಲ ಕುಮಾರ ಹೇಳಿದರು.
ಇದನ್ನೂ ಓದಿ: Dattapeeta Fighter: ಅಂದು-ಇಂದು ಎಂದೆಂದಿಗೂ ನಾನು ದತ್ತಪೀಠ ಹೋರಾಟಗಾರನೇ, ಹಿಂದೆ ಸರಿಯುವ ಮಾತೇ ಇಲ್ಲ-ಸಚಿವ ಸುನಿಲ್ ಕುಮಾರ್