ಸಂಪುಟ ವಿಸ್ತರಣೆ: ನೀವು ಕೇಳಿದ್ದನ್ನೇ ಕೇಳ್ತೀರಿ ನಾನು ಹೇಳಿದ್ದನ್ನೇ ಹೇಳ್ತೀನಿ ಅಂದರು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ಶನಿವಾರ ಬೆಂಗಳೂರಲ್ಲಿ ಸುದ್ದಿಗಾರರು ಯಾವಾಗ ಸ್ವಾಮೀ ವಿಸ್ತರಣೆ ಅಂತ ಕೇಳಿದಾಗ, ನೀವು ಕೇಳಿದ್ದನ್ನೇ ಕೇಳ್ತೀರಿ, ನಾನು ಹೇಳಿದ್ದನ್ನೇ ಹೇಳ್ತೀನಿ. ಅದು ನಿಮ್ಮ ಮುಖ್ಯಮಂತ್ರಿಗಳಿಗ ಬಿಟ್ಟ ವಿಷಯ. ಅವರು ಹಿರಿಯ ನಾಯಕರೊಂದಿಗೆ ಚರ್ಚಿಸಿ ಅದನ್ನು ಮಾಡುತ್ತಾರೆ ಅಂತ ಅರುಣ್ ಸಿಂಗ್ ಹೇಳಿದರು.

TV9kannada Web Team

| Edited By: Arun Belly

May 14, 2022 | 6:44 PM

Bengaluru: ರಾಜ್ಯ ಸಚಿವ ಸಂಪುಟ (cabinet expansion) ಪುನಾರಚನೆ ಅಥವಾ ವಿಸ್ತರಣೆ ಮುಂದಿನ ವಿಧಾನ ಸಭಾ ಚುನಾವಣೆ ನಡೆದು ಹೊಸ ಸರ್ಕಾರ ರಚಿಸಿದ ನಂತರವೇ ಆಗಲಿದೆ ಮಾರಾಯ್ರೇ. ವಿಸ್ತರಣೆ ಯಾವಾಗ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಕೇಳಿದರೆ ಅವರು ದೆಹಲಿಯತ್ತ (Delhi) ಬೊಟ್ಟು ತೋರಿಸುತ್ತಾರೆ. ದೆಹಲಿಯವರನ್ನು ಕೇಳಿದರೆ ಅದು ನಿಮ್ಮ ಮುಖ್ಯಮಂತ್ರಿಗಳ ವಿವೇಚನೆ ಬಿಟ್ಟಿದ್ದು, ಅವರು ವರಿಷ್ಠರ ಜೊತೆ ಚರ್ಚಿಸಿ ಅದನ್ನು ಇಷ್ಟರಲ್ಲೇ ಮಾಡುತ್ತಾರೆ ಅಂತ ಹೇಳುತ್ತಾರೆ. ಅವರು ಹೇಳುವ ‘ಇಷ್ಟರಲ್ಲೇ’ ಪದದ ಅರ್ಥ ನಮಗಂತೂ ಅರ್ಥ ಅಗುತ್ತಿಲ್ಲ. ರಾಜ್ಯದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ಅವರಿಗೆ ಈ ಪ್ರಶ್ನೆ ಕೇಳಿಸಿಕೊಂಡು ಸಾಕಾಗಿದೆಯಂತೆ.

ಶನಿವಾರ ಬೆಂಗಳೂರಲ್ಲಿ ಸುದ್ದಿಗಾರರು ಯಾವಾಗ ಸ್ವಾಮೀ ವಿಸ್ತರಣೆ ಅಂತ ಕೇಳಿದಾಗ, ನೀವು ಕೇಳಿದ್ದನ್ನೇ ಕೇಳ್ತೀರಿ, ನಾನು ಹೇಳಿದ್ದನ್ನೇ ಹೇಳ್ತೀನಿ. ಅದು ನಿಮ್ಮ ಮುಖ್ಯಮಂತ್ರಿಗಳಿಗ ಬಿಟ್ಟ ವಿಷಯ. ಅವರು ಹಿರಿಯ ನಾಯಕರೊಂದಿಗೆ ಚರ್ಚಿಸಿ ಅದನ್ನು ಮಾಡುತ್ತಾರೆ ಅಂತ ಹೇಳಿದರು.

ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಾತಾಡಿದ ಅರುಣ್ ಸಿಂಗ್ ಅವರು, ಶನಿವಾರ ನಡೆಯಲಿರುವ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿಗಳು ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುತ್ತಾರೆ ಮತ್ತು ಪಟ್ಟಿಯನ್ನು ಕೇಂದ್ರೀಯ ಚುನಾವಣಾ ಸಮಿತಿಗೆ ಕಳಿಸಲಾಗುವುದು. ಪಕ್ಷದ ಹೈಕಮಾಂಡ್ ಸ್ಪರ್ಧೆಗೆ ಇಳಿಸಬೇಕಾದ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸುವುದು ಎಂದು ಹೇಳಿದರು.

ಬಿಜೆಪಿ ಪಕ್ಷ ಗೊಂದಲಗಳ ಗೂಡಾಗಿದೆ ಎಂದು ಮಾಧ್ಯಮದವರು ಹೇಳಿದಾಗ ಗೊಂದಲಗಳಿಗೆ ನಮ್ಮ ಪಕ್ಷದಲ್ಲಿ ಅವಕಾಶವೇ ಇಲ್ಲ, ನಮ್ಮ ನಾಯಕರಲ್ಲಿ ಮತ್ತು ಅವರು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಸ್ಪಷ್ಟತೆ ಇದೆ, ಗೊಂದಲಗಳಿರುವುದು ಕಾಂಗ್ರೆಸ್ ನಲ್ಲಿ ಮಾತ್ರ ಅಂತ ಅರುಣ್ ಸಿಂಗ್ ಹೇಳಿದರು.

ಇದನ್ನೂ ಒದಿ:   ನ್ಯೂಸ್ ಚ್ಯಾನೆಲ್ ಗಳಲ್ಲಿ ಯಾವ ಸುದ್ದಿ ಬಿತ್ತರಿಸಬೇಕೆಂದು ಬಿಜೆಪಿಯ ಅರುಣ್ ಸಿಂಗ್ ಕನ್ನಡ ಮಾಧ್ಯಮಗಳಿಗೆ ಸಲಹೆ ನೀಡಿದರು!

Follow us on

Click on your DTH Provider to Add TV9 Kannada