ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ; ಕುಡಿದು ಬಾಟಲ್ ಎಸೆದು ಹೋಗ್ತಿದ್ದವರಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು, ವಿಡಿಯೋ ಇಲ್ಲಿದೆ

ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ; ಕುಡಿದು ಬಾಟಲ್ ಎಸೆದು ಹೋಗ್ತಿದ್ದವರಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು, ವಿಡಿಯೋ ಇಲ್ಲಿದೆ

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 18, 2023 | 1:24 PM

ಕಾಫಿನಾಡಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಕಲ್ಲತ್ತಿಗಿರಿ ಕೆಮ್ಮಣ್ಣುಗುಂಡಿ ರಸ್ತೆ ಮಾರ್ಗದಲ್ಲಿ ಕುಡಿದು ಎಲ್ಲಂದರಲ್ಲಿ ಬಿಯರ್ ಬಾಟಲ್, ಪ್ಲಾಸ್ಟಿಕ್ ಎಸೆದು ಹೋಗುತ್ತಿದ್ದವರಿಗೆ ಪೊಲೀಸರು, ಅವರಿಂದಲೇ ಕಸವನ್ನು ಎತ್ತಿಸಿದ್ದಾರೆ. ಈ ಮೂಲಕ ಪ್ರವಾಸಿಗರ ಹುಚ್ಚಾಟಕ್ಕೆ ಲಿಂಗದಹಳ್ಳಿ ಠಾಣೆಯ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಚಿಕ್ಕಮಗಳೂರು, ಆ.18: ನಗರದ ಜಂಜಾಟಕ್ಕೆ ಬೇಸತ್ತು ಪೃಕತಿಯ ಮಡಿಲಿನಲ್ಲಿ ಕೆಲಕಾಲ ವಿಶ್ರಮಿಸಿ ಬರಬೇಕೆಂದು ಪ್ರವಾಸಿ ತಾಣಗಳಿಗೆ ಹೋಗುತ್ತೇವೆ. ಆದರೆ, ಅಲ್ಲಿಗೆ ಹೋದ ಬಳಿಕ ನಾವು ತೆಗೆದುಕೊಂಡು ಹೋಗುವ ತ್ಯಾಜ್ಯಗಳನ್ನು ಅಲ್ಲಿಯೇ ಬೇಕಾಬಿಟ್ಟಿ ಬಿಸಾಡಿ ಬರುವವರನ್ನು ನೋಡಿದ್ದೇವೆ. ಇಂತಹ ವಿಕೃತಿ ಮೆರೆಯುವ ಪ್ರವಾಸಿಗರಿಗೆ ಪೊಲೀಸರು ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಹೌದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ (chikkamagaluru) ಪ್ರವಾಸಿಗರ ಹುಚ್ಚಾಟ ಮಿತಿಮೀರಿದ್ದು, ಕಲ್ಲತ್ತಿಗಿರಿ ಕೆಮ್ಮಣ್ಣುಗುಂಡಿ ರಸ್ತೆ ಮಾರ್ಗದಲ್ಲಿ ಕುಡಿದು ಎಲ್ಲಂದರಲ್ಲಿ ಬಿಯರ್ ಬಾಟಲ್, ಪ್ಲಾಸ್ಟಿಕ್ ಎಸೆದು ಹೋಗುತ್ತಿದ್ದವರಿಗೆ, ಅವರಿಂದಲೇ ಕಸವನ್ನು ಎತ್ತಿಸಿದ್ದಾರೆ. ಈ ಮೂಲಕ ಪ್ರವಾಸಿಗರ ಹುಚ್ಚಾಟಕ್ಕೆ ಲಿಂಗದಹಳ್ಳಿ ಠಾಣೆಯ ಪೊಲೀಸರು ಬ್ರೇಕ್ ಹಾಕಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 18, 2023 01:23 PM