ರಾಜಸ್ಥಾನದ ಪಾಕ್ ಗಡಿ ಬಳಿ ಹೈವೇ ಮೇಲೆಯೇ ಲ್ಯಾಂಡ್ ಆದ ಭಾರತೀಯ ಸೇನಾ ಹೆಲಿಕಾಪ್ಟರ್!
ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ದಾಂಟೋರ್ ಬಳಿಯ 'ರಾಷ್ಟ್ರೀಯ ಹೆದ್ದಾರಿ 911'ರ ಒಂದು ಭಾಗವನ್ನು ಭಾರತೀಯ ಸೇನೆಯು ತಾತ್ಕಾಲಿಕ ಹೆಲಿಪ್ಯಾಡ್ ಆಗಿ ಪರಿವರ್ತಿಸಿತು. ಕಾರ್ಯಾಚರಣೆಯ ಸಮರಾಭ್ಯಾಸದ ಭಾಗವಾಗಿ ಸೇನಾ ಹೆಲಿಕಾಪ್ಟರ್‌ಗಳು ಹೆದ್ದಾರಿಯ ಮೇಲೆಯೇ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ನಡೆಸಿದವು. 2016ರ ಸೆಪ್ಟೆಂಬರ್ನಲ್ಲಿ ಎಲ್ಒಸಿ ಬಳಿ ಭಾರತೀಯ ಸೇನೆ ನಡೆಸಿದ 'ಸರ್ಜಿಕಲ್ ಸ್ಟ್ರೈಕ್' ದಾಳಿಗೆ 10 ವರ್ಷಗಳು ಪೂರೈಸಿದ ನೆನಪಿಗಾಗಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗಿತ್ತು. 19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು.
ನವದೆಹಲಿ, ಸೆಪ್ಟೆಂಬರ್ 29: ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ರಾಜಸ್ಥಾನದ ದಾಂಟೋರ್ ಬಳಿಯ ‘ರಾಷ್ಟ್ರೀಯ ಹೆದ್ದಾರಿ 911’ರ ಒಂದು ಭಾಗವನ್ನು ಭಾರತೀಯ ಸೇನೆಯು ತಾತ್ಕಾಲಿಕ ಹೆಲಿಪ್ಯಾಡ್ ಆಗಿ ಪರಿವರ್ತಿಸಿತು. ಕಾರ್ಯಾಚರಣೆಯ ಸಮರಾಭ್ಯಾಸದ ಭಾಗವಾಗಿ ಸೇನಾ ಹೆಲಿಕಾಪ್ಟರ್‌ಗಳು ಹೆದ್ದಾರಿಯ ಮೇಲೆಯೇ ಯಶಸ್ವಿಯಾಗಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ನಡೆಸಿದವು. 2016ರ ಸೆಪ್ಟೆಂಬರ್ನಲ್ಲಿ ಎಲ್ಒಸಿ ಬಳಿ ಭಾರತೀಯ ಸೇನೆ ನಡೆಸಿದ ‘ಸರ್ಜಿಕಲ್ ಸ್ಟ್ರೈಕ್’ ದಾಳಿಗೆ 10 ವರ್ಷಗಳು ಪೂರೈಸಿದ ನೆನಪಿಗಾಗಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗಿತ್ತು. 19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಸೇನಾ ನೆಲೆ ಮೇಲಿನ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿತ್ತು.
ಈ ಕವಾಯತಿನಲ್ಲಿ ರುದ್ರ, ಧ್ರುವ ಮತ್ತು ಚೇತಕ್ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿತ್ತು. ಸಾಂಪ್ರದಾಯಿಕ ಏರ್‌ಫೀಲ್ಡ್ ಅಥವಾ ಸೇನಾ ಹೆಲಿಪ್ಯಾಡ್ ಬಳಕೆಯ ಬದಲಿಗೆ, ಪೈಲಟ್‌ಗಳು ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ತರಬೇತಿ ಪಡೆದರು. ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಮುಖ್ಯ ಏರ್‌ಬೇಸ್‌ಗಳು ಅಥವಾ ಏರ್‌ಫೀಲ್ಡ್‌ಗಳು ಲಭ್ಯವಿಲ್ಲದಿದ್ದಾಗ ಹೆದ್ದಾರಿಗಳನ್ನು ಪರ್ಯಾಯ ಏರ್‌ಫೀಲ್ಡ್‌ಗಳಾಗಿ ಹೇಗೆ ಬಳಸಬಹುದು ಎಂಬುದನ್ನು ಪರೀಕ್ಷಿಸುವುದು ಈ ಕವಾಯತಿನ ಪ್ರಮುಖ ಉದ್ದೇಶವಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ