ಬಿಜೆಪಿ ನಾಯಕರು ವಿಷಯದ ಮೇಲೆ ಪ್ರಶ್ನೆ ಕೇಳಿದರೆ ಉತ್ತರ ಕೊಡಬಹುದು: ಪ್ರಿಯಾಂಕ್ ಖರ್ಗೆ

ಬಿಜೆಪಿ ನಾಯಕರು ವಿಷಯದ ಮೇಲೆ ಪ್ರಶ್ನೆ ಕೇಳಿದರೆ ಉತ್ತರ ಕೊಡಬಹುದು: ಪ್ರಿಯಾಂಕ್ ಖರ್ಗೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 28, 2024 | 5:07 PM

ಅಸಲಿಗೆ ಬಿಜೆಪಿ ನಾಯಕರಿಗೆ ಕಾಮನ್ ಸೆನ್ಸ್ ಇಲ್ಲ, ಅವರಿಗೆ ಸಿಎಸ್ಐ ಸೈಟ್ ಅಂದರೇನು ಅಂತ ಗೊತ್ತಿಲ್ಲ, ಹರಾಜು ಪ್ರಕ್ರಿಯೆ ಇಂಡಸ್ಟ್ರಿಯಲ್ ಸೈಟುಗಳಿಗೆ ನಡೆಯುತ್ತದೆಯೇ ಹೊರತು ಸಿಎಸ್ಐ ಜಮೀನುಗಳಿಗೆ ಅಲ್ಲ, ಅವರಿಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ದ ಆರೋಪ ಮಾಡಬೇಕಿದೆ ಅಷ್ಟೇ ಎಂದು ಸಚಿವ ಹೇಳಿದರು.

ಬೆಂಗಳೂರು: ಬಿಜೆಪಿ ನಾಯಕರು ಗಾಳಿಯಲ್ಲಿ ಗುಂಡು ಹಾರಿಸುತ್ತ ವೈಯಕ್ತಿಕ ಟೀಕೆಗಳನ್ನು ಮಾಡೋದು ಬಿಟ್ಟು ತಮ್ಮ ಟ್ರಸ್ಟ್ ಗೆ ಜಮೀನು ಆಲಾಟ್ ಮಾಡಿರುವ ಪ್ರಕರಣದಲ್ಲಿ ಯಾವ ನಿಯಮದ ಉಲ್ಲಂಘನೆಯಾಗಿದೆ, ಜಮೀನು ಪಡೆದಿರುವುದು ಹೇಗೆ ಕಾನೂನುಬಾಹಿರ ಅಂತ ಹೇಳಿದರೆ ಪಾಯಿಂಟ್ ಟು ಪಾಯಿಂಟ್ ಉತ್ತರ ಕೊಡಬಹುದು, ಅವರು ರಾಜ್ಯಪಾಲರಿಗೆ ಕೊಟ್ಟಿರುವ ದೂರಿಗೆ ಉತ್ತರವನ್ನು ಕೊಟ್ಡಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತಮ್ಮನ್ನು ರಾಜಸ್ಥಾನಿ ಎಂದು ಕರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಲಹರ್ ಸಿಂಗ್ ವಾಗ್ದಾಳಿ