IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025 SRH vs MI: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 41ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 143 ರನ್ ಗಳಿಸಿತು. ಈ ಸುಲಭ ಗುರಿಯನ್ನು ಮುಂಬೈ ಇಂಡಿಯನ್ಸ್ ತಂಡವು ಕೇವಲ 15.4 ಓವರ್ಗಳಲ್ಲಿ 146 ರನ್ ಬಾರಿಸಿ ಜಯ ಸಾಧಿಸಿದೆ.
IPL 2025: ಐಪಿಎಲ್ 2025ರ 41ನೇ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ವಿಕೆಟ್ ಒಪ್ಪಿಸಿದ ರೀತಿ ಚರ್ಚೆಗೀಡಾಗಿದೆ. ದೀಪಕ್ ಚಹರ್ ಎಸೆದ ಮೂರನೇ ಓವರ್ನ ಮೊದಲ ಎಸೆತವು ಲೆಗ್ ಸೈಡ್ ಮೂಲಕ ವಿಕೆಟ್ ಕೀಪರ್ ಕೈ ಸೇರಿತು. ಚೆಂಡು ವಿಕೆಟ್ ಕೀಪರ್ ಕೈ ಸೇರುತ್ತಿದ್ದಂತೆ ಇಶಾನ್ ಕಿಶನ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಆದರೆ ಆ ಬಳಿಕ ರಿಪ್ಲೇ ಪರಿಶೀಲಿಸಿದಾಗ ಚೆಂಡು ಬ್ಯಾಟ್ಗೆ ತಾಗಿರಲಿಲ್ಲ ಎಂಬುದು ಸ್ಪಷ್ಟವಾಗಿತ್ತು.
ಇದಾಗ್ಯೂ ಇಶಾನ್ ಕಿಶನ್ ಪ್ರಮಾಣಿಕನಾಗಿ ಕ್ರೀಡಾ ಸ್ಪೂರ್ತಿ ಮೆರೆದರೆ ಎಂದು ಕೇಳಿದರೆ, ಇಲ್ಲ ಎಂಬ ಉತ್ತರ ನೀಡಬಹುದು. ಏಕೆಂದರೆ ಇಶಾನ್ ಕಿಶನ್ ಚೆಂಡು ಬ್ಯಾಟ್ಗೆ ತಗುಲಿದೆ ಎಂದು ಭಾವಿಸಿ ಮೈದಾನ ತೊರೆಯಲು ಮುಂದಾಗಿದ್ದರು. ಆದರೆ ಕ್ಷಣಾರ್ಧದಲ್ಲಿ ಅವರಿಗೆ ಅಂಪೈರ್ ಔಟ್ ನೀಡಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಮತ್ತೆ ಕ್ರೀಸ್ಗೆ ಹಿಂತಿರುಗಿದ್ದರು.
ಆದರೆ ಅತ್ತ ಅಂಪೈರ್ ಔಟ್ ನೀಡಲು ಮುಂದಾಗಿದ್ದರಿಂದ ದೀಪಕ್ ಚಹರ್ ಅಪೀಲ್ ಮಾಡಿದ್ದಾರೆ. ಹೀಗಾಗಿ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ವೇಳೆ ಡಿಆರ್ಎಸ್ ರಿವ್ಯೂ ತೆಗೆದುಕೊಳ್ಳುವ ಅವಕಾಶವಿದ್ದರೂ, ಇಶಾನ್ ಕಿಶನ್ ಎಡವಟ್ಟು ಮಾಡಿಕೊಂಡರು.
ಚೆಂಡು ಬ್ಯಾಟ್ಗೆ ತಗುಲಿದೆ ಎಂಬ ಗುಂಗಿನಲ್ಲಿದ್ದ ಇಶಾನ್ ಕಿಶನ್ ರಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್ ಕಡೆ ಹಿಂತಿರುಗಿದ್ದಾರೆ. ಅಂದರೆ ಇಶಾನ್ ಕಿಶನ್ ಅಂಪೈರ್ ನಿರ್ಧಾರವನ್ನು ನಂಬಿ ತನ್ನ ವಿಕೆಟ್ ಒಪ್ಪಿಸಿರುವುದು ಸ್ಪಷ್ಟ. ಅದರಲ್ಲೂ ಅಂಪೈರ್ ತೀರ್ಪಿಗೆ ಕಾಯದೇ ಮೊದಲ ಪೆವಿಲಿಯನ್ ಕಡೆ ಹೆಜ್ಜೆಯಾಗಲು ಮುಂದಾಗಿ ದೊಡ್ಡ ತಪ್ಪು ಮಾಡಿರುವುದು ಈ ವಿಡಿಯೋದಲ್ಲಿ ಕಾಣಬಹುದು.
ಇನ್ನು ಈ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 143 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 15.4 ಓವರ್ಗಳಲ್ಲಿ 146 ರನ್ ಬಾರಿಸಿ 7 ವಿಕೆಟ್ಗಳ ಗೆಲುವು ದಾಖಲಿಸಿದೆ.