24 ಗಂಟೆಯಲ್ಲೇ ಬಗೆಹರಿದ ಶಾಸಕರ IPL ಟಿಕೆಟ್ ಜ್ವಲಂತ ಸಮಸ್ಯೆ, ಒಬ್ಬರಿಗೆ ಎಷ್ಟು ಗೊತ್ತಾ?

Updated on: Mar 27, 2026 | 5:36 PM

ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ , ಐಪಿಎಲ್  ಮ್ಯಾಚ್​ಗಳ ಟಿಕೆಟ್ (IPL Ticket)  ವಿಚಾರವಾಗಿ ಸದನದಲ್ಲಿ ಎತ್ತಿದ ಪ್ರಶ್ನೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ವೇದಿಕೆಯಾಗಿದೆ. ಹೌದು..ನಿನ್ನೆ (ಮಾರ್ಚ್ 26) ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್​ ಮ್ಯಾಚ್​ಗಳ ಟಿಕೆಟ್​ ಬಗ್ಗೆ ಕೇಳಿದ ಪ್ರಶ್ನೆ ಈಗ ರಾಜಕೀಯ ಜಟಾಪಟಿಗೆ ತಿರುಗಿದೆ. ಏನೋ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದಂತೆ ಸದನದಲ್ಲಿ ಐಪಿಎಲ್ ಟಿಕೆಟ್​ ಬೇಡಿಕೆ ಇಟ್ಟಿದ್ದರು.  ಇದಕ್ಕೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸಹ ಧ್ವನಿಗೂಡಿಸಿದ್ದರು.  ಇದರ ಬೆನ್ನಲ್ಲೇ 24 ಗಂಟೆಗಳಲ್ಲಿ ಶಾಸಕರ ಐಪಿಎಲ್ ಟಿಕೆಟ್ ಸಮಸ್ಯೆ ಬಗೆಹರಿದಿದೆ.

ಬೆಂಗಳೂರು, (ಮಾರ್ಚ್ 27): ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ , ಐಪಿಎಲ್  ಮ್ಯಾಚ್​ಗಳ ಟಿಕೆಟ್ (IPL Ticket)  ವಿಚಾರವಾಗಿ ಸದನದಲ್ಲಿ ಎತ್ತಿದ ಪ್ರಶ್ನೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ವೇದಿಕೆಯಾಗಿದೆ. ಹೌದು..ನಿನ್ನೆ (ಮಾರ್ಚ್ 26) ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್​ ಮ್ಯಾಚ್​ಗಳ ಟಿಕೆಟ್​ ಬಗ್ಗೆ ಕೇಳಿದ ಪ್ರಶ್ನೆ ಈಗ ರಾಜಕೀಯ ಜಟಾಪಟಿಗೆ ತಿರುಗಿದೆ. ಏನೋ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದಂತೆ ಸದನದಲ್ಲಿ ಐಪಿಎಲ್ ಟಿಕೆಟ್​ ಬೇಡಿಕೆ ಇಟ್ಟಿದ್ದರು.  ಇದಕ್ಕೆ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಸಹ ಧ್ವನಿಗೂಡಿಸಿದ್ದರು.  ಇದರ ಬೆನ್ನಲ್ಲೇ 24 ಗಂಟೆಗಳಲ್ಲಿ ಶಾಸಕರ ಐಪಿಎಲ್ ಟಿಕೆಟ್ ಸಮಸ್ಯೆ ಬಗೆಹರಿದಿದೆ.

ಶಾಸಕರು ತಮ್ಮ ಸ್ವಾರ್ಥಕ್ಕಾಗಿ ಐಪಿಎಲ್ ಟಿಕೆಟ್​​ಗಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿದ ಬೆನ್ನಲ್ಲೇ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಇಂದು (ಮಾರ್ಚ್ 27) ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು. ಈ ವೇಳೆ ನಾಳೆಯ (ಮಾರ್ಚ್ 28) ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 1+1 ಒಟ್ಟು 2 ಟಿಕೆಟ್ ನೀಡಲು ಕೆಎಸ್‌ಸಿಎ ಒಪ್ಪಿಕೊಂಡಿದೆ. ಸದ್ಯ ಒಬ್ಬ ಶಾಸಕರಿಗೆ ಎರಡು ಟಿಕೆಟ್ ನೀಡಲು ಒಪ್ಪಿರುವ ಕೆಎಸ್‌ಸಿಎ, ಮುಂದಿನ‌ ಐಪಿಎಲ್‌ ಪಂದ್ಯಕ್ಕೆ 4 ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಸದನದಲ್ಲೂ ಐಪಿಎಲ್ ಟಿಕೆಟ್ ಬಗ್ಗೆ ಚರ್ಚೆ: ಮ್ಯಾಚ್‌ ಟಿಕೆಟ್‌ಗಾಗಿ ಸರ್ಕಾರವನ್ನು ಬೇಡಿದ ಶಾಸಕರು!

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More