RCB vs LSG: ಬರೋಬ್ಬರಿ 102 ಮೀಟರ್; ಸ್ಟೇಡಿಯಂನಿಂದ ಹೊರ ಹೋದ ಚೆಂಡು

Updated on: Apr 15, 2026 | 9:16 PM

Mitchell Marsh 102m six: ಐಪಿಎಲ್ 2026ರ ಆರ್‌ಸಿಬಿ vs ಎಲ್‌ಎಸ್‌ಜಿ ಪಂದ್ಯದಲ್ಲಿ ಲಕ್ನೋದ ಮಿಚೆಲ್ ಮಾರ್ಷ್ ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ 102 ಮೀಟರ್ ಸಿಕ್ಸರ್ ಸಿಡಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಾಖಲಾದ ಈ ಬೃಹತ್ ಸಿಕ್ಸರ್ ಈ ಆವೃತ್ತಿಯ ಮೂರನೇ ಅತಿ ಉದ್ದದ ಸಿಕ್ಸ್ ಆಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಮಾರ್ಷ್ 32 ಎಸೆತಗಳಲ್ಲಿ 40 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಐಪಿಎಲ್ 2026 ರ 23ನೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಎಂಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಲಕ್ನೋದ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಆರ್‌ಸಿಬಿಯ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್‌ನಲ್ಲಿ ಅಮೋಘ ಸಿಕ್ಸರ್ ಬಾರಿಸಿದರು. ಮಾರ್ಷ್​ ಅವರ ಮಸಲ್ ಪವರ್ ಎಷ್ಟಿತ್ತೆಂದರೆ ಬ್ಯಾಟ್​ಗೆ ಬಡಿದ ಚೆಂಡು ಸ್ಟೇಡಿಯಂನಿಂದ ಹೊರ ಹೋಯಿತು. ಇದೀಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಎಲ್‌ಎಸ್‌ಜಿ ಮೊದಲು ಬ್ಯಾಟಿಂಗ್ ಮಾಡಿತು. ಮೂರನೇ ಓವರ್‌ ಎಸೆದ ಭುವನೇಶ್ವರ ಕುಮಾರ್ ಬೌಲಿಂಗ್‌ನಲ್ಲಿ ಮಿಚೆಲ್ ಮಾರ್ಷ್ ಬೃಹತ್ ಸಿಕ್ಸರ್ ಬಾರಿಸಿದರು. ಭುವನೇಶ್ವರ ಕುಮಾರ್ ಅವರ ಶಾರ್ಟ್ ಎಸೆತವನ್ನು ಆನ್‌ಸೈಡ್ ಕಡೆಗೆ ಮಾರ್ಷ್​ ಪುಲ್ ಶಾಟ್ ಹೊಡೆದರು. ಕ್ರೀಡಾಂಗಣದ ಛಾವಣಿಯ ಮೇಲೆ ಹಾರಿದ ಚೆಂಡು 102 ಮೀಟರ್ ದೂರ ಹೋಗಿ ಬಿತ್ತು. ಇದು ಈ ಆವೃತ್ತಿಯ ಮೂರನೇ ಅತಿ ಉದ್ದದ ಸಿಕ್ಸ್ ಆಗಿದೆ.

ಐಪಿಎಲ್ 2026 ರ ಅತಿ ಉದ್ದದ ಸಿಕ್ಸ್ ಪ್ರಸ್ತುತ ಟಿಮ್ ಡೇವಿಡ್ ಅವರ ಹೆಸರಿನಲ್ಲಿದೆ. ಅವರು ಇದೇ ಮೈದಾನದಲ್ಲಿ 106 ಮೀಟರ್ ಸಿಕ್ಸ್ ಹೊಡೆದಿದ್ದರು. ಕೂಪರ್ ಕಾನೊಲಿಯ ಅವರು ಬಾರಿಸಿದ್ದ 103 ಮೀಟರ್ ಸಿಕ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಬ್ಯಾಟ್ಸ್‌ಮನ್ ಸ್ನೇಹಿ ಪಿಚ್‌ನಲ್ಲಿ ಇಂತಹ ದೀರ್ಘ ಸಿಕ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತವೆ.

ಲಕ್ನೋ ಸೂಪರ್ ಜೈಂಟ್ಸ್ ತಂಡವು ಕಳಪೆ ಆರಂಭ ಪಡೆಯಿತು. ಆದಾಗ್ಯೂ, ಮಿಚೆಲ್ ಮಾರ್ಷ್ 32 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಒಳಗೊಂಡಂತೆ ನಿರ್ಣಾಯಕ 40 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದಾಗ್ಯೂ, ಕೃನಾಲ್ ಪಾಂಡ್ಯ ಅವರ ಅದ್ಭುತ ಎಸೆತವು ಅವರ ಅರ್ಧಶತಕವನ್ನು ತಲುಪುವುದನ್ನು ತಡೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us