AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs LSG: ಸಾಲ್ಟ್ ಸೂಪರ್ ಮ್ಯಾಚ್ ಕ್ಯಾಚ್; ಪಂತ್ ಒಂದೇ ರನ್​ಗೆ ಸುಸ್ತು

RCB vs LSG: ಸಾಲ್ಟ್ ಸೂಪರ್ ಮ್ಯಾಚ್ ಕ್ಯಾಚ್; ಪಂತ್ ಒಂದೇ ರನ್​ಗೆ ಸುಸ್ತು

ಪೃಥ್ವಿಶಂಕರ
|

Updated on: Apr 15, 2026 | 10:26 PM

Share

Phil Salt's Superhuman IPL Catch: ಆರ್​ಸಿಬಿ ಆಟಗಾರ ಫಿಲ್ ಸಾಲ್ಟ್ ಐಪಿಎಲ್‌ನಲ್ಲಿ ಕೇವಲ ಬ್ಯಾಟಿಂಗ್‌ ಮಾತ್ರವಲ್ಲದೆ, ತಮ್ಮ ಅದ್ಭುತ ಫಿಲ್ಡಿಂಗ್ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ಅವರ ಸಿಕ್ಸರ್ ಯತ್ನವನ್ನು ಸೂಪರ್ ಮ್ಯಾನ್ ಕ್ಯಾಚ್ ಮೂಲಕ ತಡೆದು, ತಂಡಕ್ಕೆ ಮಹತ್ವದ ವಿಕೆಟ್ ತಂದುಕೊಟ್ಟರು. ಈ ಅಸಾಧಾರಣ ಕ್ಯಾಚ್ ಅವರ ಆಲ್‌ರೌಂಡ್ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ, ಪಂದ್ಯದ ದಿಕ್ಕನ್ನೇ ಬದಲಿಸುವ ಅವರ ಸಾಮರ್ಥ್ಯವನ್ನು ಇದು ತೋರಿಸಿದೆ.

ಸ್ಫೋಟಕ ಬ್ಯಾಟಿಂಗ್​ಗೆ ಹೆಸರು ವಾಸಿಯಾಗಿರುವ ಆರ್​ಸಿಬಿ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಫಿಲ್ಡಿಂಗ್ ಮೂಲಕವು ಸಖತ್ ಸದ್ದು ಮಾಡುತ್ತಿದ್ದಾರೆ. ಈ ಅವೃತ್ತಿಯಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್​ಗಳನ್ನು ಹಿಡಿದು ಪಂದ್ಯದ ದಿಕ್ಕನ್ನು ಬದಲಿಸಿದ್ದ ಸಾಲ್ಟ್, ಇದೀಗ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಮತ್ತದೇ ಅದ್ಭುತ ಫಿಲ್ಡಿಂಗ್ ಮಾಡುವ ಮೂಲಕ ಸೂಪರ್​ ಮ್ಯಾನ್​ನಂತೆ ಎಗರಿ ಅಸಾಧಾರಣವಾದ ಕ್ಯಾಚ್​ವೊಂದನ್ನು ಹಿಡಿದಿದ್ದಾರೆ.

ವಾಸ್ತವವಾಗಿ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಮೊದಲ ವಿಕೆಟ್ ಪತನದ ಬಳಿಕವೇ ಬ್ಯಾಟಿಂಗ್​ಗೆ ಬಂದಿದ್ದರು. ಆದರೆ ಹೇಜಲ್‌ವುಡ್ ಎಸೆದ ಮೂರನೇ ಓವರ್​ನಲ್ಲಿ ರಿಷಭ್ ಪಂತ್ ಖಾತೆಯನ್ನು ತೆರೆಯುವುದಕ್ಕೂ ಮುನ್ನವೇ ತಮ್ಮ ಎಡ ಮೊಣಕೈಗೆ ಗಂಭೀರವಾಗಿ ಗಾಯಮಾಡಿಕೊಂಡರು. ಹೀಗಾಗಿ ಪಂತ್ ಅರ್ಧದಲ್ಲೇ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದರು.

ಆದರೆ ತಂಡದ ಇನ್ನಿಂಗ್ಸ್ ಕುಸಿದಿದ್ದರಿಂದ ಪಂತ್ 17ನೇ ಓವರ್​ನಲ್ಲಿ ಮತ್ತೆ ಬ್ಯಾಟಿಂಗ್​ಗೆ ಬಂದರು. ಭುವನೇಶ್ವರ್ ಕುಮಾರ್ ಎಸೆದ ಈ ಓವರ್​ನಲ್ಲಿ ಪಂತ್​ಗೆ ದೊಡ್ಡ ಹೊಡೆತಗಳನ್ನು ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಓವರ್​ನ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಲು ಪಂತ್ ಯತ್ನಿಸಿದರು. ಆದರೆ ಡೀಪ್ ಸ್ಕ್ವೈರ್​ನಲ್ಲಿ ನಿಂತಿದ್ದ ಸಾಲ್ಟ್ ಮುಂದಕ್ಕೆ ಓಡಿ ಬಂದು ಚಿರತೆಯಂತೆ ಎಗರಿ ಅದ್ಭುತ ಕ್ಯಾಚ್ ತೆಗೆದುಕೊಂಡರು. ಹೀಗಾಗಿ ಪಂತ್ 6 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us