AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs PBKS: ಈ ಸೀಸನ್​ನ ಬೆಸ್ಟ್ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್; ನೀವೇ ನೋಡಿ

MI vs PBKS: ಈ ಸೀಸನ್​ನ ಬೆಸ್ಟ್ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್; ನೀವೇ ನೋಡಿ

ಪೃಥ್ವಿಶಂಕರ
|

Updated on: Apr 16, 2026 | 10:21 PM

Share

Shreyas Iyer's IPL 2026 Incredible Catch: ಐಪಿಎಲ್ 2026ರ 24ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅಸಾಧಾರಣ ಕ್ಯಾಚ್ ಹಿಡಿದು ಎಲ್ಲರ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯರ ಲಾಂಗ್ ಆನ್ ಶಾಟ್ ಬೌಂಡರಿ ದಾಟುವ ಮುನ್ನ, ಅಯ್ಯರ್ ಗಾಳಿಯಲ್ಲಿ ಹಾರಿ ಚೆಂಡನ್ನು ಒಳಕ್ಕೆಸೆದರು. ಈ ಅದ್ಭುತ ಫೀಲ್ಡಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಅಚ್ಚರಿಗೊಳಿಸಿತು.

ಐಪಿಎಲ್ 2026 ರ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಅಸಾಧಾರಣ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಲಾಂಗ್ ಆನ್ ಕಡೆಗೆ ಬಿಗ್ ಶಾಟ್ ಆಡಿದರು. ಈ ವೇಳೆ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶ್ರೇಯಸ್ ಅಯ್ಯರ್ ಗಾಳಿಯಲ್ಲಿ ಹಾರಿ ಮೊದಲು ಚೆಂಡನ್ನು ಹಿಡಿದರು. ಆ ನಂತರ, ತಾನು ಬೌಂಡರಿ ಲೈನ್‌ ಅನ್ನು ದಾಡುತ್ತಿರುವುದನ್ನು ಗಮನಿಸಿದ ಶ್ರೇಯಸ್ ಗಾಳಿಯಲ್ಲಿ ಇರುವಾಗಲೇ ಚೆಂಡನ್ನು ಮೇಲಕ್ಕೆ ಎಸೆದರು. ಈ ವೇಳೆ ಅಲ್ಲಿಯೇ ಇದ್ದ ಕ್ಸೇವಿಯರ್ ಬಾರ್ಟ್ಲೆಟ್ ಕ್ಯಾಚ್ ಪೂರ್ಣಗೊಳಿಸಿದರು. ಶ್ರೇಯಸ್ ಅಯ್ಯರ್ ಹಿಡಿದ ಈ ಅದ್ಭುತ ಕ್ಯಾಚ್​ ಅನ್ನು ಡಗೌಟ್​ನಲ್ಲಿ ಕುಳಿತಿದ್ದ ಮುಂಬೈ ತಂಡದ ಎಲ್ಲಾ ಆಟಗಾರರು ದಿಗ್ಭ್ರಮೆಗೊಂಡರು.

Follow Us