Karnataka Assembly Polls 2023: ಮಂಡ್ಯದಲ್ಲಿ ಜೆಡಿಎಸ್ ಗೆ ಆತಂಕ ಸೃಷ್ಟಿಸುತ್ತಿರುವ ಪಕ್ಷಾಂತರ ಪರ್ವ, ಶ್ರೀರಂಗಪಟ್ಟಣದಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ!
ಕೆಆರ್ ಪೇಟೆಯಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆನಿಸಿಕೊಂಡಿದ್ದ ವಕೀಲ ಎಲ್ ದೇವರಾಜು ಕಾಂಗ್ರೆಸ್ ಸೇರಿದ್ದೂ ಅಲ್ಲದೆ ಟಿಕೆಟ್ ಕೂಡ ಗಿಟ್ಟಿಸಿದ್ದಾರೆ.
ಮಂಡ್ಯ: ಜೆಡಿಎಸ್ ಪಕ್ಷಕ್ಕೆ ಇದು ನಿಜಕ್ಕೂ ಆತಂಕದ ಸಂಗತಿ. ಸಕ್ಕರೆ ನಾಡು ಮಂಡ್ಯ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಜಿಲ್ಲೆಯ ಹಲವಾರು ಭಾಗಗಳಲ್ಲಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಕೆಆರ್ ಪೇಟೆಯಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೆನಿಸಿಕೊಂಡಿದ್ದ ವಕೀಲ ಎಲ್ ದೇವರಾಜು (L Devaraju) ಕಾಂಗ್ರೆಸ್ ಸೇರಿದ್ದೂ ಅಲ್ಲದೆ ಟಿಕೆಟ್ ಕೂಡ ಗಿಟ್ಟಿಸಿದ್ದಾರೆ. ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೂಡಲಕುಪ್ಪೆ ಗ್ರಾಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಶೇಷಣ್ಣ, ಮಂಜುನಾಥ್ ಮೊದಲಾದವರು ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಚೆಲುವರಾಯಸ್ವಾಮಿ (Cheluvarayaswamy) ಮತ್ತು ರಮೇಶ್ ಬಾಬು (Ramesh Babu) ಸಮಕ್ಷಮ ಕಾಂಗ್ರೆಸ್ ಸೇರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos