ಕೊರೊನಾ ಲಸಿಕೆ ಬಳಿಕ ಹೃದಯಾಘಾತದ ಭಯ? ಮಾತ್ರೆ ತೆಗೆದುಕೊಳ್ಳುವ ನಟ ಕೋಮಲ್

Edited By:

Updated on: Jul 01, 2025 | 8:05 PM

ಹಾಸನದಲ್ಲಿ ಹೃದಯಾಘಾತದ ಸುದ್ದಿ ಮತ್ತೆ ಮತ್ತೆ ಕೇಳಿಬರುತ್ತಿದೆ. ಆ ಬಗ್ಗೆ ನಟ ಕೋಮಲ್ ಕುಮಾರ್ ಮಾತನಾಡಿದ್ದಾರೆ. ‘ವ್ಯಾಕ್ಸಿನೇಷನ್ ಆದ ನಂತರ ಬಹಳಷ್ಟು ಜನರಿಗೆ ಏರುಪೇರು ಆಗಿದೆ. ಕೊರೊನಾದಿಂದ ನಾನು 24 ದಿನಗಳ ಕಾಲ ಐಸಿಯುನಲ್ಲಿ ಇದ್ದೆ. ಇಂದಿಗೂ ನಾನು ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಸಾಲು ಸಾಲು ಹೃದಯಾಘಾತದ (Heart Attack) ಸುದ್ದಿ ಕೇಳಿಬರುತ್ತಿದೆ. ಆ ಬಗ್ಗೆ ನಟ ಕೋಮಲ್ ಅವರು ಮಾತನಾಡಿದ್ದಾರೆ. ‘ವ್ಯಾಕ್ಸಿನೇಷನ್ ಆದಮೇಲೆ ಬಹಳಷ್ಟು ಜನರಿಗೆ ಏರುಪೇರು ಆಗಿದೆ. ನಾನು ಕೊರೊನಾದಿಂದ 24 ದಿನ ಐಸಿಯುನಲ್ಲಿ ಇದ್ದೆ. ನಾನು ಇಂದಿಗೂ ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತೇನೆ. ವಾಟ್ಸಪ್​ನಲ್ಲಿ ಎಲ್ಲರೂ ಡಾಕ್ಟರ್ ಆಗಿದ್ದಾರೆ. ನಾವು ಸ್ವತಃ ಔಷಧಿ ತೆಗೆದುಕೊಳ್ಳಬಾರದು. ಡಾಕ್ಟರ್​ ಭೇಟಿ ಮಾಡಿ ಸಲಹೆ ಪಡೆಯಬೇಕು. ಕೊರೊನಾ (Corona) ಬಂದವರಿಗೆ ಕ್ಲಾಟ್ ಆಗುತ್ತದೆ. ಅದನ್ನು ಸರಿ ಮಾಡದೇ ಇದ್ದರೆ ಹೃದಯಾಘಾತ, ಸ್ಟ್ರೋಕ್ ಆಗುವ ಸಾಧ್ಯತೆ ಇರುತ್ತದೆ. ಮುನ್ನೆಚ್ಚರಿಕೆಯಿಂದ ನಾನು ಮಾತ್ರೆ ತೆಗೆದುಕೊಳ್ಳುತ್ತೇನೆ’ ಎಂದು ಕೋಮಲ್ (Komal Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More