ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಸಚಿವ ಪ್ರಲ್ಹಾದ್ ಜೋಶಿ ಕಿಡಿ
ಮುಖ್ಯಾಂಶಗಳು
- ಎಥೆನಾಲ್ ವಿಚಾರವಾಗಿ ರಾಜ್ಯ ಸರ್ಕಾರ ವಿರುದ್ಧ ಪ್ರಲ್ಹಾದ್ ಜೋಶಿ ಕಿಡಿ
- ಎಥೆನಾಲ್ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ
- ಎಥೆನಾಲ್ ಬಳಕೆ ಆತ್ಮನಿರ್ಭರತೆಯ ಪ್ರಮುಖ ಹೆಜ್ಜೆಯಾಗಿದೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಪರಿಶೀಲನೆ ನಡೆಸದೆ ಸುಳ್ಳು ಆರೋಪ ಮಾಡುತ್ತಿದೆ ಎಂದ ಅವರು, ಪೆಟ್ರೋಲ್ ಪರಿಶೀಲನೆಗೆ ನಿರ್ದಿಷ್ಟ ವಿಧಾನವಿದೆ. ಕೇಂದ್ರ ಸರ್ಕಾರದ ನೀತಿ ಪ್ರಕಾರ ಶೇ. 20ರಷ್ಟು ಎಥೆನಾಲ್ ಮಿಶ್ರಣವಿದ್ದು, ಶೇ. 19-21ರಷ್ಟು ವ್ಯತ್ಯಾಸಕ್ಕೆ ಅನುಮತಿಯಿದೆ ಎಂದು ಸ್ಪಷ್ಟಪಡಿಸಿದರು.
ಹುಬ್ಬಳ್ಳಿ, ನವೆಂಬರ್ 07: ‘ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡಿತ್ತಿದೆ. ರಾಜ್ಯ ಸರ್ಕಾರ ಯಾವುದನ್ನೂ ಸರಿಯಾಗಿ ಪರಿಶೀಲನೆ ಮಾಡಿಲ್ಲ’ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಪೆಟ್ರೋಲ್ನಲ್ಲಿ 20 ಶೇಕಡಾ ಅಲ್ಲ 31 ಪರ್ಸೆಂಟ್ ಎಥೆನಾಲ್ ಆರೋಪ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪೆಟ್ರೋಲ್ ಚೆಕ್ ಮಾಡಬೇಕಾದರೆ ಅದಕ್ಕೆ ಪ್ರೊಸಿಜರ್ ಇದೆ. ಅದನ್ನು ಫಾಲೋಮಾಡದೆ ಎಥೆನಾಲ್ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೆಚ್ಚುವರಿ ಎಥೆನಾಲ್ ಖರೀದಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಎಥೆನಾಲ್ ಬಳಕೆ ಆತ್ಮನಿರ್ಭರತೆಯ ಪ್ರಮುಖ ಹೆಜ್ಜೆಯಾಗಿದೆ. ಜಗತ್ತಿನಲ್ಲಿ ಸಮಸ್ಯೆ ಆದರೆ ಭಾರತದಲ್ಲಿ ಇಂಧನ ಸಮಸ್ಯೆ ಆಗಲಿಲ್ಲ’ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

