ಕರ್ನಾಟಕ ಎಂಎಲ್ಸಿ ಚುನಾವಣೆ: ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್

Edited By:

Updated on: Jun 11, 2026 | 11:16 AM

ಕರ್ನಾಟಕ ವಿಧಾನ ಪರಿಷತ್ ಚುನಾವಣಾ ರಣಕಣ ರಂಗೇರಿದೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಹೆಚ್.ಡಿ. ಕುಮಾರಸ್ವಾಮಿಯವರಿಗೆ ಪ್ರತಿಷ್ಠೆಯ ಸವಾಲಾಗಿ ಪರಿಣಮಿಸಿದೆ. ಎನ್​ಡಿಎ ಅಭ್ಯರ್ಥಿಗೆ ನಾಲ್ಕರಿಂದ ಐದು ಮತಗಳ ಕೊರತೆಯಿದ್ದು, ಕಾಂಗ್ರೆಸ್‌ನಿಂದ ಮತ ಸೆಳೆಯುವ ಅನಿವಾರ್ಯತೆ ಇದೆ. ಅಲ್ಲದೆ, ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಹನೂರು ಮಂಜುನಾಥ್ ಅವರಿಂದ ಅಡ್ಡ ಮತದಾನದ ಭೀತಿ ಎದುರಾಗಿದೆ.

ಬೆಂಗಳೂರು, ಜೂನ್​​ 11: ಕರ್ನಾಟಕ ವಿಧಾನ ಪರಿಷತ್ ಚುನಾವಣಾ ಕಣವು ತೀವ್ರ ಕುತೂಹಲ ಮೂಡಿಸಿದೆ. ಜೆಡಿಎಸ್ ನಾಯಕರಿಗೆ ಒಂದು ಲೆಕ್ಕದಲ್ಲಿ ಡಬಲ್ ಟೆನ್ಷನ್ ಶುರುವಾಗಿದೆ. ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಪ್ರತಿಷ್ಠೆಯ ಸವಾಲಾಗಿ ಪರಿಣಮಿಸಿದೆ. ಎನ್​ಡಿಎಯ ಮೂರನೇ ಅಭ್ಯರ್ಥಿ ಗೆಲುವಿಗೆ ಸದ್ಯ ನಾಲ್ಕರಿಂದ ಐದು ಮತಗಳ ಕೊರತೆ ಇದೆ. ಈ ಮತಗಳನ್ನು ಕಾಂಗ್ರೆಸ್ ಪಾಳಯದಿಂದ ಸೆಳೆಯಬೇಕಾದ ಅನಿವಾರ್ಯತೆ ಜೆಡಿಎಸ್ ಮೇಲಿದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಪಕ್ಷದೊಳಗೆ ಅಡ್ಡ ಮತದಾನದ ಭೀತಿ ಕಾಡುತ್ತಿದೆ. ಪ್ರಮುಖವಾಗಿ, ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಹನೂರು ಮಂಜುನಾಥ್ ಅವರ ನಡೆ ನಿರ್ಣಾಯಕವಾಗಿದ್ದು, ಅವರ ಮತದಾನದ ಬಗ್ಗೆ ಆತಂಕವಿದೆ. ಈಗಾಗಲೇ ಅವರನ್ನು ಮನವೊಲಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 11, 2026 11:13 AM
Follow Us
Sunil MH