ಕುಂಭಮೇಳದಲ್ಲೂ ಸದ್ದು ಮಾಡಿದ ಕರ್ನಾಟಕದ ಗುತ್ತಿಗೆ ಬಿಲ್ ಬಾಕಿ: ಪುಣ್ಯ ಸ್ನಾನದ ವೇಳೆ ಗುತ್ತಿಗೆದಾರ ಹರಕೆ
ಕುಂಭಮೇಳದಲ್ಲೂ ಸದ್ದು ಮಾಡಿದ ಕರ್ನಾಟಕದ ಗುತ್ತಿಗೆ ಬಿಲ್ ಬಾಕಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಕಾಮಗಾರಿಗಳ ಬಿಲ್ ಬಾಕಿ ಬಿಡುಗಡೆಯಾಗದೆ ಕಂಗಾಲಾಗಿರುವ ಗುತ್ತಿಗೆದಾರರು ಇದೀಗ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಅಳಲು ತೋಡಿಕೊಂಡಿದ್ದಾರೆ. ಬಾಗಲಕೋಟೆಯ ಗುತ್ತಿಗೆದಾರರು ಬಿಲ್ ಬಿಡುಗಡೆಗೆ ಹರಕೆ ಹೊತ್ತು ಪುಣ್ಯಸ್ನಾನ ಮಾಡಿದ ವಿಡಿಯೋ ಈಗ ವೈರಲ್ ಆಗುತ್ತಿದೆ.
ಬಾಗಲಕೋಟೆ, ಫೆಬ್ರವರಿ 5: ಕರ್ನಾಟಕದಲ್ಲಿ ಕಾಮಗಾರಿಗಳ ಬಿಲ್ ಬಾಕಿಯನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ ಎಂಬ ಆರೋಪ ಕೆಲವು ತಿಂಗಳುಗಳಿಂದಲೂ ಕೇಳಿಬರುತ್ತಿದೆ. ಇದೀಗ ರಾಜ್ಯದ ಗುತ್ತಿಗೆ ಬಿಲ್ ಬಾಕಿ ವಿಚಾರ ಉತ್ತರ ಪ್ರದೇಶದ ಪ್ರಯಾಗ್ಪ್ರಯಾಗ್ ರಾಜ್ ಕುಂಭಮೇಳದಲ್ಲಿಯೂ ಸದ್ದು ಮಾಡಿದೆ. ಬಾಗಲಕೋಟೆ ಮೂಲದ ಗುತ್ತಿಗೆದಾರರು ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದು, ಗುತ್ತಿಗೆ ಬಿಲ್ ಬಾಕಿ ಬಿಡುಗಡೆಯಾಗಲಿ ಎಂದು ಹರಕೆ ಹೊತ್ತಿದ್ದಾರೆ.
‘‘ಕರ್ನಾಟಕದ ಎಲ್ಲ ಗುತ್ತಿಗೆದಾರರಿಗೆ ಬಿಲ್ ಬಾಕಿ ಬಿಡುಗಡೆ ಆಗಲಿ. ಹೊಸ ಹೊಸ ಕಾಮಗಾರಿಗಳು ಆರಂಭವಾಗಲಿ. ಎಲ್ಲ ಗುತ್ತಿಗೆದಾರರ ಬಾಳು ಸಮೃದ್ಧಿಯಿಂದ ಕೂಡಿರಲಿ. ಹರ ಹರ ಮಹದೇವ್’’ ಎಂದು ಬೇಡಿಕೊಂಡು ಗುತ್ತಿಗೆದಾರರು ಪುಣ್ಯ ಸ್ನಾನ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ