Raksha Bandhan: ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋಗೆ ಭಾರೀ ಮೆಚ್ಚುಗೆ

Updated on: Aug 28, 2026 | 9:10 PM

ರಕ್ಷಾ ಬಂಧನ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯರು ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದರು. ಯೋಧರ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಕಾಶ್ಮೀರಿ ಯುವತಿಯರು ಹಾಗೂ ಶಾಲಾ ಬಾಲಕಿಯರು ರಕ್ಷಾಬಂಧನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದರು. ಜಾತಿ-ಧರ್ಮ ಮೀರಿ ಸಹೋದರತ್ವ ಸಾರಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ರೀನಗರ, ಆಗಸ್ಟ್ 28: ರಕ್ಷಾ ಬಂಧನ (Raksha Bandhan) ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯರು ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದರು. ಯೋಧರ ಕೈಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ ಕಾಶ್ಮೀರಿ ಯುವತಿಯರು ಹಾಗೂ ಶಾಲಾ ಬಾಲಕಿಯರು ರಕ್ಷಾಬಂಧನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿದರು. ಜಾತಿ-ಧರ್ಮ ಮೀರಿ ಸಹೋದರತ್ವ ಸಾರಿದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬನಿಹಾಲ್‌ನಲ್ಲಿ ಸ್ಥಳೀಯ ಮುಸ್ಲಿಂ ಯುವತಿಯರು ಸೈನಿಕರಿಗೆ ರಾಖಿ ಕಟ್ಟಿ ಸಿಹಿತಿಂಡಿಗಳನ್ನು ನೀಡಿದರು. ರಾಷ್ಟ್ರವನ್ನು ರಕ್ಷಿಸಲು ನಿಯೋಜಿಸಲಾದ ಸೈನಿಕರು ಮನೆಗೆ ಮರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಿಶೇಷ ಸಂದರ್ಭದಲ್ಲಿ, ಮುಸ್ಲಿಂ ಮಹಿಳೆಯರು ಪ್ರೀತಿಯಿಂದ ಸೈನಿಕರಿಗೆ ತಿಲಕ ಹಚ್ಚಿ, ರಾಖಿ ಕಟ್ಟಿ ಹಬ್ಬವನ್ನು ಆಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us