ಕೆಪಿಟಿಸಿಎಲ್ ನೌಕರ ಸಂಘದ ವಜ್ರಮಹೋತ್ಸವ: ಸಮಾಜಕ್ಕೆ ನೀವು ಬೆಳಕಾಗಿದ್ದೀರಿ ಎಂದ ಶಿವಕುಮಾರ್

Updated on: Jun 18, 2025 | 4:06 PM

ತಮ್ಮ ಭಾಷಣದಲ್ಲಿ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮತ್ತು ತನಗೆ ಕೆಪಿಟಿಸಿಎಲ್ ನೌಕರರು ತೋರಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ವೇದಿಕೆ ಮೇಲೆ ಬೆಳಗಿಸಿದ ದೀಪವನ್ನು ಉಲ್ಲೇಖಿಸುತ್ತಾ ಶಿವಕುಮಾರ್, ದೀಪವನ್ನೇನೋ ನಾವು ಬೆಳಗಿಸಿದ್ದೇವೆ, ಅದರೆ ದೀಪ ಚೆಲ್ಲುವ ಬೆಳಕು ನೀವು, ವಿದ್ಯುಚ್ಛಕ್ತಿ ಇಲಾಖೆಯ ನೌಕರರಾಗಿ ನೀವು ಇಡೀ ಸಮಾಜಕ್ಕೆ ಬೆಳಕು ನೀಡುತ್ತಿರುವಿರಿ ಎಂದು ಹೇಳಿದಾಗ ಮತ್ತೊಮ್ಮೆ ಚಪ್ಪಾಳೆ, ಶಿಳ್ಳೆ.

ಬೆಂಗಳೂರು, ಜೂನ್ 18: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ (Diamond Jubilee Celebration) ಹಿಂದಿನ ಇಂಧನ ಸಚಿವ ಮತ್ತು ಈಗಿಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ನೌಕರರಿಂದ ಭಾರೀ ಕರತಾಡನದ ಸ್ವಾಗತ ಸಿಕ್ಕಿತು. ನಿರೂಪಕರು ಶಿವಕುಮಾರ್ ಹೆಸರು ಉಲ್ಲೇಖಿಸುತ್ತಿದ್ದಂತೆ ಕೆಪಿಟಿಸಿಎಲ್ ನೌಕರರಲ್ಲಿ ವಿದ್ಯುತ್ ಸಂಚಾರ, ಜೋರು ಚಪ್ಪಾಳೆ ಮತ್ತು ಕೇಕೆಗಳೊಂದಿಗೆ ಸ್ವಾಗತ. ವೇದಿಕೆಯ ಮೇಲೆ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಕದಲ್ಲಿ ಕೂತಿದ್ದ ಶಿವಕುಮಾರ್ ಮುಖದಲ್ಲಿ ಮಂದಹಾಸ ಮತ್ತು ಅವ್ಯಕ್ತ ಹೆಮ್ಮೆ! ನಗರದ ಅರಮನೆ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇದನ್ನೂ ಓದಿ:    ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ