ವಿಧಾನಸಭೆಗೆ ತಮ್ಮನ್ನು ಆರಿಸಿ ಕಳಿಸಿದ ಜನರೆಡೆ ಕುಮಾರಸ್ವಾಮಿಗೆ ಬದ್ಧತೆ ಇಲ್ಲ: ಡಿಕೆ ಸುರೇಶ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿ 15 ದಿನಕ್ಕೊಮ್ಮೆ ವರುಣ ಮತ್ತು ಕನಕಪುರಕ್ಕೆ ಭೇಟಿ ನೀಡುತ್ತಾರೆ, ಅದು ಮತದಾರರೆಡೆ ಅವರಿಗಿರುವ ಬದ್ಧತೆಯನ್ನು ತೋರುತ್ತದೆ, ಅದರೆ ಕುಮಾರಸ್ವಾಮಿ ಚನ್ನಪಟ್ಟಣದಿಂದ ಗೆದ್ದು ಹೋದ ಬಳಿಕ ಈ ಚುನಾವಣೆ ಬಿಟ್ಟರೆ ಬೇರೆ ಸಮಯದಲ್ಲಿ ಜನರ ಕಷ್ಟ ಸುಖ ಕೇಳಲು ಬಂದಿದ್ದಾರಾ? ಎಂದು ಸುರೇಶ್ ಪ್ರಶ್ನಿಸಿದರು.
ರಾಮನಗರ: ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಡಿಕೆ ಸುರೇಶ್, ಮತ್ತೊಮ್ಮೆ ಹೆಚ್ ಡಿ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯ ಬಗ್ಗೆ ಆಡಿದ ಮಾತಿನ ವಿಡಿಯೋವನ್ನು ಪ್ಲೇ ಮಾಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೋಡುವಂತೆ ಹೇಳಿದರು. ತಾನು ಯೋಗೇಶ್ವರ್ ಗೆ ಬೈದಿರುವ ಆಡಿಯೋಗೆ ಪ್ರತಿಕ್ರಿಯಿಸಿದ ಸುರೇಶ್, ತಮ್ಮಿಬ್ಬರ ನಡುವೆ 30 ವರ್ಷದ ಸ್ನೇಹವಿದೆ, ತಾನು ಅವರನ್ನು ಬೈದರೆ ಅವರು ತನ್ನನ್ನು ಬೈತಾರೆ, ಅದು ತಮ್ಮ ವೈಯಕ್ತಿಕ, ಆದರೆ ಕುಮಾರಸ್ವಾಮಿ ತಮ್ಮನ್ನು ಅಯ್ಕೆ ಮಾಡಿ ಕಳಿಸಿದ ಚನ್ನಪಟ್ಟಣದ ಮತದಾರನಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಟಿಟ್ ಫಾರ್ ಟ್ಯಾಟ್; ಡಿಕೆ ಸುರೇಶ್ ಆಡಿಯೋ ಬಹಿರಂಗಗೊಳಿಸಿದ ಹೆಚ್ ಡಿ ಕುಮಾರಸ್ವಾಮಿ