ಹೊಸ ಕೇಸ್ ಬಗ್ಗೆ ದರ್ಶನ್ ಜತೆ ಲಾಯರ್ ಚರ್ಚೆ; ಮತ್ತೆ ಶುರುವಾಗಲಿದೆ ವಿಚಾರಣೆ
ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿನಲ್ಲಿ ಇಂದು (ಸೆ.25) ಲಾಯರ್ ಭೇಟಿ ಮಾಡಿದ್ದಾರೆ. ಗುರುವಾರ (ಸೆ.26) ಆರಂಭ ಆಗಲಿರುವ ಹೊಸ ಪ್ರಕರಣದ ತನಿಖೆಯ ಬಗ್ಗೆ ದರ್ಶನ್ಗೆ ವಕೀಲರು ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಅಂದಾಜು 35 ನಿಮಿಷಗಳ ಕಾಲ ದರ್ಶನ್ ಜೊತೆ ವಕೀಲರು ಮಾತುಕಥೆ ನಡೆಸಿದ್ದಾರೆ. ಇನ್ನೊಂದೆಡೆ, ದರ್ಶನ್ಗೆ ಜಾಮೀನು ಕೊಡಿಸಲು ಪ್ರಯತ್ನ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳಿಂದ ಅಂದಾಜು 85 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈಗ ವಿಚಾರಣೆ ಆರಂಭಿಸಿದ್ದಾರೆ. ಈ ಹಣದ ಮೂಲದ ಬಗ್ಗೆ ದರ್ಶನ್ ಉತ್ತರ ನೀಡಬೇಕಿದೆ. ಆ ವಿಚಾರಣೆಯ ಬಗ್ಗೆ ದರ್ಶನ್ಗೆ ಸಲಹೆ ನೀಡಲು ಬಳ್ಳಾರಿ ಜೈಲಿಗೆ ಅವರ ಪರ ವಕೀಲರು ಭೇಟಿ ನೀಡಿದ್ದರು. ಆದರೆ ಭೇಟಿಯ ಬಳಿಕ ಅವರು ಮಾಧ್ಯಮಗಳ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.