ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ಆರೋಪಿ ದರ್ಶನ್​ ಜಾಮೀನು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪರ ವಕೀಲರು ಆ ಬಗ್ಗೆ ಮಾತನಾಡಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇಂದು (ಸೆಪ್ಟೆಂಬರ್​ 24) ವಕೀಲರು ದರ್ಶನ್​ ಜೊತೆ ಮಾತನಾಡಿ ಬಂದಿದ್ದಾರೆ. ನಂತರ ಮಾಧ್ಯಮಗಳ ಎದುರು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.

ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
| Updated By: ಮದನ್​ ಕುಮಾರ್​

Updated on: Sep 24, 2024 | 5:50 PM

ನಟ ದರ್ಶನ್​ಗೆ ಜಾಮೀನು ಸಿಗುವುದು ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆ ಬಗ್ಗೆ ದರ್ಶನ್ ಪರ ವಕೀಲರು ಮಾತನಾಡಿದ್ದಾರೆ. ‘ಕಳೆದ ಶನಿವಾರ ನಾವು ಬೇಲ್​ಗೆ ಅರ್ಜಿ ಹಾಕಿದ್ದೇವೆ. ಕಾನೂನಿನ ಪ್ರಕ್ರಿಯೆ ನಡೆಯುತ್ತಿದೆ. ಇದು 302 ಪ್ರಕರಣ ಆದ್ದರಿಂದ ಮೊದಲ ಬಾರಿಗೆ ಸೆಷನ್ಸ್​ ಕೋರ್ಟ್​ನಲ್ಲೇ ಅರ್ಜಿ ಸಲ್ಲಿಸಬೇಕು. ಅಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್​ಗೆ ಹೋಗುತ್ತೇವೆ. ಕಾನೂನಿನ ಪ್ರಕ್ರಿಯೆ ಇರುವುದೇ ಹಾಗೆ. ಸೆಷನ್ಸ್​ ಕೋರ್ಟ್​ನಲ್ಲಿಯೇ ದರ್ಶನ್​ಗೆ ಜಾಮೀನು ಸಿಗುತ್ತೆ ಎಂಬ ಭರವಸೆ ನಮಗೆ ಇದೆ’ ಎಂದು ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us