ಕೆಪಿಎಸ್ಸಿ ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್ ಬುಕ್ಕಿಂಗ್ ಸೇರಿ ಹಲವು ಪ್ರಮುಖ ವಿಚಾರಗಳು ಪತ್ತೆ
ಕೆಪಿಎಸ್ಸಿ ನೇಮಕಾತಿ ಹಗರಣದ ಅಕ್ರಮ ಹಣವನ್ನು ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ. ಗೀತಾ ಅವರ ವಿಮಾನ ಟಿಕೆಟ್ ಬುಕಿಂಗ್‌ಗೆ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಿಂದ ಬಹಿರಂಗಗೊಂಡಿದೆ. ಮೈ ಟ್ರಾವೆಲ್ ಏರ್ ಮೂಲಕ ಪಿಎ ಕೃಷ್ಣ ಹಣ ಪಾವತಿಸಿ ಟಿಕೆಟ್ ಬುಕ್ ಮಾಡಿದ್ದು, ಇಡಿ ಅಧಿಕಾರಿಗಳು ಹಣಕಾಸು ವ್ಯವಹಾರಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ಸುಳಿವು ನೀಡಿದ್ದೇ ಅಭ್ಯರ್ಥಿಗಳ ಅಂಕ ಪಟ್ಟಿ ಎಂಬುದೂ ಈಗ ಗೊತ್ತಾಗಿದೆ.
ಬೆಂಗಳೂರು, ಅಕ್ಟೋಬರ್ 09: KPSC ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಮತ್ತಷ್ಟು ವಿಚಾರಗಳು ತನಿಖೆ ವೇಳೆ ಬಯಲಾಗಿವೆ. ಕೆಪಿಎಸ್ಸಿ ಅಕ್ರಮ ಹಣದಲ್ಲಿ ಶಿವಶಂಕರಪ್ಪ ಸಾಹುಕಾರ್ ಮತ್ತು ಬಿ.ವಿ.ಗೀತಾಗೆ ಫ್ಲೈಟ್ ಟಿಕೆಟ್ ಬುಕ್ಕಿಂಗ್ ಮಾಡಿರೋದು ಇಡಿ ಅಧಿಕಾರಿಗಳ ತನಿಖೆ ವೇಳೆ ಗೊತ್ತಾಗಿದೆ. ಮೈ ಟ್ರಾವೆಲ್ ಏರ್ ಹಾಗೂ ಏಜೆಂಟ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲಾಗಿತ್ತು ಎಂದು ಇಡಿ ವಿಚಾರಣೆ ವೇಳೆ ಶಿವಶಂಕರಪ್ಪ ಸಾಹುಕಾರ್ ಪಿಎ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಈ ಹಗರಣದ ಬಗ್ಗೆ ಸುಳಿವು ನೀಡಿದ್ದೇ ಅಭ್ಯರ್ಥಿಗಳ ಅಂಕ ಪಟ್ಟಿ. ಶಿವಶಂಕರಪ್ಪ ಮತ್ತು ಗೀತಾ ಜೊತೆಗೆ ನಂದೀಶ್, ವಿನುತಾ ಸತತ ಸಂಪರ್ಕದಲ್ಲಿದ್ದರು. ಈ ಸಂಬಂಧ ಸಿಡಿಆರ್, ಸಿಸಿಟಿವಿ, ವಾಟ್ಸ್ಆ್ಯಪ್ ಸಂಭಾಷಣೆ ಪತ್ತೆಯಾಗಿತ್ತು. ಹೀಗಾಗಿ ವಿನುತಾ ಹಾಗೂ ನಂದೀಶ್ ಮಾರ್ಕ್ಸ್ ಕಾರ್ಡ್ ಪರಿಶೀಲನೆ ನಡೆಸಿದಾಗ ಆರೋಪಿಗಳ ಕಳ್ಳಾಟ ಬಯಲಾಗಿದೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

