AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ಬೆಂಗಳೂರಿಗೆ ಬರಬೇಕಿದ್ದ 'ಕೈ' ಶಾಸಕರ ಪ್ರವಾಸ ಕೊನೇ ಕ್ಷಣದಲ್ಲಿ ರದ್ದು

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ಬೆಂಗಳೂರಿಗೆ ಬರಬೇಕಿದ್ದ ‘ಕೈ’ ಶಾಸಕರ ಪ್ರವಾಸ ಕೊನೇ ಕ್ಷಣದಲ್ಲಿ ರದ್ದು

ನವೀನ್ ಕುಮಾರ್ ಟಿ
| Edited By: |

Updated on:Jun 09, 2026 | 7:42 PM

Share

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಭೀತಿ ಹಿನ್ನೆಲೆ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್​​ ಆಗಿದ್ದಾರೆ. ಬೆಂಗಳೂರು ಏರ್​ಪೋರ್ಟ್​ಗೆ ಆಗಮಿಸಲಿರುವ ಶಾಸಕರು, ಕೆಐಎಬಿಯಿಂದ ವಂಡರ್​ ಲಾ ರೆಸಾರ್ಟ್​​ಗೆ ತೆರಳಲಿದ್ದಾರೆ. ಅವರನ್ನು ಕರೆದೊಯ್ಯಲು ವಿಶೇಷ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ. ಜೂನ್ 17ರ ರಾತ್ರಿ ಅಥವಾ 18ರ ಬೆಳಗ್ಗೆ 63 ಶಾಸಕರು ಇಲ್ಲಿಂದ ಹಿಂದಿರುಗಲಿದ್ದಾರೆ ಎನ್ನಲಾಗಿದೆ.

ಬೆಂಗಳೂರು, ಜೂನ್​​ 09: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಭೀತಿ ಹಿನ್ನೆಲೆ, ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿತ್ತು. ಭೋಪಾಲ್​ನಿಂದ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಲಿರುವ ಶಾಸಕರು, ಕೆಐಎಬಿಯಿಂದ ವಂಡರ್​ ಲಾ ರೆಸಾರ್ಟ್​​ಗೆ ತೆರಳಲಿದ್ದಾರೆ. 63 ಶಾಸಕರು ಸೇರಿದಂತೆ 75 ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ರೆಸಾರ್ಟ್​ನಲ್ಲಿ 54 ರೂಮ್ ಬುಕ್ಕಿಂಗ್ ಆಗಿವೆ. ಜೂನ್ 17ರ ರಾತ್ರಿ ಅಥವಾ 18ರ ಬೆಳಗ್ಗೆ 63 ಶಾಸಕರು ಇಲ್ಲಿಂದ ಹಿಂದಿರುಗಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಕೊನೇ ಕ್ಷಣದಲ್ಲಿ ಪ್ರಯಾಣ ರದ್ದಾಗಿದ್ದು, ಭೋಪಾಲ್​ ಏರ್​ಪೋರ್ಟ್​ನಿಂದ ಶಾಸಕರು ವಾಪಸ್​​ ಆಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 09, 2026 07:07 PM

Follow Us