AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾ ಶಿವರಾತ್ರಿ: ಹರಿಹರದ ಮಲೆಬೆನ್ನೂರಿನಲ್ಲಿ 108 ಶಿವಲಿಂಗಗಳ ಶಾಂತಿ ಯಾತ್ರೆ

ಮಹಾ ಶಿವರಾತ್ರಿ: ಹರಿಹರದ ಮಲೆಬೆನ್ನೂರಿನಲ್ಲಿ 108 ಶಿವಲಿಂಗಗಳ ಶಾಂತಿ ಯಾತ್ರೆ

ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ|

Updated on: Mar 08, 2024 | 10:09 PM

Share

108 ಶಿವಲಿಂಗಗಳನ್ನು ಹೊತ್ತ ವಾಹನಗಳು ಗ್ರಾಮಗಳಲ್ಲಿ ಸಂಚರ ಮಾಡಿವೆ. ಹೆಲಿಕಾಪ್ಟರ್ ಮೂಲಕ 108 ಶಿವಲಿಂಗಗಳಿಗೆ ಭಕ್ತರು ಹೂವಿನ ಮಳೆ ಸುರಿಸಿದ್ದಾರೆ. ಅಲ್ಲದೆ ಅಗಸದಿಂದ ಈಶ್ವರನ ಸಂದೇಶ ಕರಪತ್ರ ವಿತರಣೆ ಮಾಡಲಾಗಿದೆ. ನೂರಾರು ವಾಹನಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ದೇಶದ ಎಲ್ಲಾ ಕಡೆಗಳಲ್ಲಿ ಇರುವ 108 ಶಿವಲಿಂಗಗಳ ಮಾದರಿಗಳನ್ನು ಮಾಡಲಾಗಿದೆ.

ದಾವಣಗೆರೆ, ಮಾರ್ಚ್​​ 08: ಶಿವರಾತ್ರಿ ಹಬ್ಬದ ಹಿನ್ನಲೆ ಸದ್ಬವನ ಶೋಭಾಯಾತ್ರೆ ಮಾಡಲಾಗಿದೆ. ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಹರಿಹರದ ಮಲೆಬೆನ್ನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚಾರ ಮಾಡಲಾಗಿದೆ. 108 ಶಿವಲಿಂಗಗಳನ್ನು ಹೊತ್ತ ವಾಹನಗಳು ಗ್ರಾಮಗಳಲ್ಲಿ ಸಂಚರ ಮಾಡಿವೆ. ಹೆಲಿಕಾಪ್ಟರ್ ಮೂಲಕ 108 ಶಿವಲಿಂಗಗಳಿಗೆ ಭಕ್ತರು ಹೂವಿನ ಮಳೆ ಸುರಿಸಿದ್ದಾರೆ. ಅಲ್ಲದೆ ಅಗಸದಿಂದ ಈಶ್ವರನ ಸಂದೇಶ ಕರಪತ್ರ ವಿತರಣೆ ಮಾಡಲಾಗಿದೆ. ನೂರಾರು ವಾಹನಗಳು ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ದೇಶದ ಎಲ್ಲಾ ಕಡೆಗಳಲ್ಲಿ ಇರುವ 108 ಶಿವಲಿಂಗಗಳ ಮಾದರಿಗಳನ್ನು ಮಾಡಲಾಗಿದೆ. ಈ ಶಿವಲಿಂಗಗಳನ್ನು ಮೂರು ದಿನಗಳ ಕಾಲ ಈಶ್ವರಿ ವಿದ್ಯಾಲಯದಲ್ಲಿ ಜನರ ದರ್ಶನಕ್ಕೆ ಇಡಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.