ಮಂಡ್ಯ ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್

Edited By:

Updated on: Jun 14, 2025 | 11:13 AM

ವಿಶ್ವಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯದಲ್ಲಿ ಭದ್ರತಾ ವೈಫಲ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. ಅಪರಿಚಿತ ಯುವಕರು ಕ್ರಸ್ಟ್ ಗೇಟ್ ಬಳಿಯ ಅಪಾಯಕಾರಿ ಸ್ಥಳದಲ್ಲಿ ಸೆಲ್ಫಿ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಿಂದ ಕೈಗಾರಿಕಾ ಭದ್ರತಾ ಪಡೆಯ ಕಾರ್ಯ ವೈಖರಿ ಬಗ್ಗೆ ಅನುಮಾನ ಮೂಡಿವೆ.

ಮಂಡ್ಯ, ಜೂನ್​ 14: ವಿಶ್ವಪ್ರಸಿದ್ಧ ಕೃಷ್ಣರಾಜಸಾಗರ ಜಲಾಶಯದಲ್ಲಿ (KRS Dam) ಭದ್ರತಾ ವೈಫಲ್ಯ ಆರೋಪ ಕೇಳಿಬಂದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಅಪರಿಚಿತ ಯುವಕರು ಓಡಾಡುತ್ತ ಸೆಲ್ಫಿ ವಿಡಿಯೋ ಮಾಡಿ ಹುಚ್ಚಾಟ ಮೆರೆದಿರುವಂತಹ ಘಟನೆ ನಡೆದಿದೆ. ಬಿಗಿ ಭದ್ರತೆ ಇದ್ರೂ ಇಲ್ಲಿಗೆ ಬಂದಿದ್ದೇವೆ ಎಂದು ಯುವಕ ವಿಡಿಯೋದಲ್ಲಿ ಹೇಳಿದ್ದಾನೆ. ಸದ್ಯ ವಿಡಿಯೋ ಸೊಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಕೆಆರ್​ಎಸ್​ ಡ್ಯಾಂ ಭದ್ರತಾ ವೈಫಲ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.