ತೆಲಂಗಾಣದ ಚೆರ್ಲಪಲ್ಲಿ ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ತೆಲಂಗಾಣದ ಚೆರ್ಲಪಲ್ಲಿ ಕೈಗಾರಿಕಾ ಪ್ರದೇಶದ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

ಸುಷ್ಮಾ ಚಕ್ರೆ
|

Updated on: Feb 04, 2025 | 9:53 PM

ಬೆಂಕಿಯ ಕಾರಣದಿಂದಾಗಿ ರಾಸಾಯನಿಕ ಕಾರ್ಖಾನೆಯಲ್ಲಿ ಇರಿಸಲಾಗಿದ್ದ ರಾಸಾಯನಿಕ ಬ್ಯಾರೆಲ್‌ಗಳು ಸಿಡಿಯಲು ಪ್ರಾರಂಭಿಸಿದವು. ಇದು ಬೆಂಕಿಯನ್ನು ಮತ್ತಷ್ಟು ಉಲ್ಬಣಗೊಳಿಸಿತು. ದಟ್ಟವಾದ ಹೊಗೆ ಇಡೀ ಪ್ರದೇಶವನ್ನು ಆವರಿಸಿತು ಮತ್ತು ಬೆಂಕಿ ಪಕ್ಕದ ಮಹಾಲಕ್ಷ್ಮಿ ರಬ್ಬರ್ ಕಂಪನಿಗೂ ಹರಡಿತು. ಇದರಿಂದಾಗಿ ಪ್ರದೇಶದಾದ್ಯಂತ ರಾಸಾಯನಿಕ ಮಾಲಿನ್ಯ ಹರಡಿತು. ಈ ದುರಂತದಲ್ಲಿ ಯಾರಿಗೂ ಯಾವುದೇ ಗಾಯಗಳು ನಡೆದಿಲ್ಲ.

ಸಿಕಂದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನ ಚೆರ್ಲಪಲ್ಲಿ ಕೈಗಾರಿಕಾ ಪ್ರದೇಶದ ಖಾಸಗಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಸಂಜೆ ಶೇಷಸಾಯಿ ರಾಸಾಯನಿಕ ಕಾರ್ಖಾನೆಯ 1ನೇ ಹಂತದಲ್ಲಿ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಬೆಂಕಿ ಬೇಗನೆ ಎಲ್ಲೆಡೆ ಹರಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವ್ಯವಸ್ಥೆ ಉಂಟು ಮಾಡಿತು. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಖಾನೆಯೊಳಗಿನ ಬ್ಯಾರೆಲ್‌ಗಳು ಸಿಡಿದವು. ಬೆಂಕಿಯ ಬಗ್ಗೆ ಮಾಹಿತಿ ಬಂದ ತಕ್ಷಣ, ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ