ಅಂಜನಾದ್ರಿಯಲ್ಲಿ ಆಂಧ್ರಪ್ರದೇಶದ ರೆಸಾರ್ಟ್ ಮಾಲೀಕರನ್ನು ತೆಲುಗಿ ಭಾಷೆಯಲ್ಲೇ ತರಾಟೆಗೆ ತೆಗೆದುಕೊಂಡರು ಆನಂದ್ ಸಿಂಗ್
ಸಚಿವರು ತೆಲುಗಿನಲ್ಲೇ ಅವರಿಗೆ, ‘ಬನ್ನಿ ಹಂಪಿಗೆ ಹೋಗೋಣ, ಅಲ್ಲಿ ಯಾವ ಬೇರೆ ಕಾನೂನು ಜಾರಿಗೊಳಿಸಲಾಗಿದೆ ಅಂತ ತೋರಿಸಿ,’ ಅಂತ ದಬಾಯಿಸುತ್ತಾರೆ.
ಬಳ್ಳಾರಿ ಜಿಲ್ಲೆ ಆಂಧ್ರಪ್ರದೇಶದ (Andhra Pradesh) ಗಡಿಭಾಗದ ಜಿಲ್ಲೆಯಾಗಿರುವುದರಿಂದ ಅಲ್ಲಿನ ಜನ ಚೆನ್ನಾಗಿ ತೆಲುಗು ಮಾತಾಡುತ್ತಾರೆ. ಹೊಸಪೇಟೆಯವರಾಗಿರುವ ಸಚಿವ ಆನಂದ್ ಸಿಂಗ್ (Anand Singh) ಕೂಡ ಚೆನ್ನಾಗಿ ಮಾತಾಡಬಲ್ಲರು. ಕೊಪ್ಪಳ ಗಂಗಾವತಿ ತಾಲ್ಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದ (Anjanadri Hill) ಪ್ರಸಿದ್ಧಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ಅಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಹಾಗಾಗಿ ಆಂಧ್ರ ಮೂಲದ ಉದ್ಯಮಿಗಳು ಅಲ್ಲಿ ರೆಸಾರ್ಟ್ಗಳನ್ನು ಆರಂಭಿಸಿದ್ದಾರೆ. ಕಾನೂನಿನ ಅಂಶವೊಂದಕ್ಕೆ ರೆಸಾರ್ಟ್ ಮಾಲೀಕರು ಮತ್ತು ಅಲ್ಲಿಗೆ ಭೇಟಿ ನೀಡಿದ್ದ ಆನಂದ್ ಸಿಂಗ್ ನಡುವೆ ವಾಗ್ವಾದ ನಡೆಯುತ್ತದೆ. ಆಗ ಮಾಲೀಕರು ಹಂಪಿಗೊಂದು ನ್ಯಾಯ ನಮಗೊಂದು ನ್ಯಾಯ ಅಂತ ತೆಲುಗು ಭಾಷೆಯಲ್ಲಿ ಗೊಣಗುತ್ತಾರೆ. ಆಗ ಸಚಿವರು ತೆಲುಗಿನಲ್ಲೇ ಅವರಿಗೆ, ‘ಬನ್ನಿ ಹಂಪಿಗೆ ಹೋಗೋಣ, ಅಲ್ಲಿ ಯಾವ ಬೇರೆ ಕಾನೂನು ಜಾರಿಗೊಳಿಸಲಾಗಿದೆ ಅಂತ ತೋರಿಸಿ,’ ಅಂತ ದಬಾಯಿಸುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.