ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದಿದ್ದ ಶಾಸಕ ರಂಗನಾಥ್​ ಧೋರಣೆ ಬದಲಾಯಿತು!

Updated on: Jul 10, 2025 | 4:14 PM

ರಂದೀಪ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಶಾಸಕರೊಂದಿಗೆ ಚರ್ಚಿಸಲೇ ಇಲ್ಲ, ಮಾಧ್ಯಮಗಳಲ್ಲಿ ಅದೆಲ್ಲ ಸೃಷ್ಟಿಯಾಗಿದೆ, ಕಾಂಗ್ರೆಸ್ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಮತ್ತು ಅದೊಂದು ಶಿಸ್ತಿನ ಪಕ್ಷ, ಶಾಸಕರ ಕುಂದು ಕೊರತೆಗಳನ್ನು ಹೈಕಮಾಂಡ್ ಗಮನಿಸುತ್ತಿರುತ್ತದೆ, ಹಾಗೆಯೇ ಹೈಕಮಾಂಡ್ ಹೇಳಿದ್ದನ್ನು ಕೂಡ ಶಾಸಕರು ಪಾಲಿಸಬೇಕು ಎಂದು ಶಾಸಕ ರಂಗನಾಥ್ ಹೇಳಿದರು.

ಬೆಂಗಳೂರು, ಜುಲೈ 10: ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ದೆಹಲಿಯಲ್ಲಿ ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಮತ್ತು ರಂದೀಪ್ ಸುರ್ಜೇವಾಲಾ ಅವರೊಂದಿಗೆ ಸಭೆ ನಡೆಸುವ ಮೊದಲೇ ಪೂರ್ಣಾವಧಿಗೆ ನಾನೇ ಸಿಎಂ ಅಂತ ಹೇಳಿದ್ದು ರಾಜ್ಯ ರಾಜಕಾರಣವನ್ನು ಗೊಂದಲಕ್ಕೆ ದೂಡಿದೆ ಅನ್ನೋದಂತೂ ಸತ್ಯ. ಎರಡು ದಿನ ಮುಂಚೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಅಂತ ಆಸೆಯಿದೆ ಎನ್ನುತ್ತಿದ್ದ ಕುಣಿಗಲ್ ಶಾಸಕ ಡಾ ಹೆಚ್ ಡಿ ರಂಗನಾಥ್ ಧೋರಣೆ ಇವತ್ತು ಬದಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಶಿವಕುಮಾರ್ ಡಿಸಿಎಂ ಆಗಿ ರಾಜ್ಯವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ, ಗ್ಯಾರಂಟಿ ಸ್ಕೀಮ್ ಗಳ ಮೂಲಕ ರಾಜ್ಯವು ದೇಶಕ್ಕೆ ಮಾದರಿ ಎನಿಸಿಕೊಳ್ಳುತ್ತಿದೆ, ಅದಕ್ಕೆ ಕಾರಣೀಭೂತರು ಸಿಎಂ ಮತ್ತು ಡಿಸಿಎಂ ಎಂದು ರಂಗನಾಥ್ ಹೇಳುತ್ತಾರೆ.

ಇದನ್ನೂ ಓದಿ:  ರಾಹುಲ್ ಗಾಂಧಿ ಜತೆ ಮಾತುಕತೆಗೂ ಮುನ್ನ ತಾವೇ 5 ವರ್ಷ ಸಿಎಂ ಎಂದ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ