Video: ಗದೆ ಹಿಡಿದು ಭೀಮನ ಪಾತ್ರದಲ್ಲಿ ಮಿಂಚಿದ ಶಾಸಕ ಶಿವಲಿಂಗೇಗೌಡ! ನಾಟಕದ ವಿಡಿಯೋ ನೋಡಿ
ಹಿಂದೆ ನಾನೂ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ಮಾಡುತ್ತಿದ್ದೆ ಎಂದು ಹಳೆಯ ದಿನ ಮೆಲುಕು ಹಾಕಿ ಅಭಿನಯ ಮಾಡಿ ತೋರಿಸಿದ್ದಾರೆ. ಸದನದಲ್ಲಿ ತಮ್ಮ ಸ್ವಾರಸ್ಯಕರ ಮಾತಿನಿಂದ ಗಮನ ಸೆಳೆಯೋ ಶಾಸಕ, ಸದನದಲ್ಲೂ ಸೈ ನಾಟಕದ ಅಭಿನಯಕ್ಕೂ ಸೈ ಎಂದು ಮಿಂಚಿದ್ಶಿದಾರೆ.
ಹಾಸನ: ಅರಸೀಕೆರೆ ತಾಲೂಕಿನ ಪಡುವನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಕುರುಕ್ಷೇತ್ರ ನಾಟಕ ವೇಳೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭೀಮನ ಪಾತ್ರದ ಡೈಲಾಗ್ ಹೇಳಿ, ಹಾಡು ಹಾಡಿದ್ದಾರೆ. ಪೌರಾಣಿಕ ನಾಟಕದ ಭೀಮನ ಪಾತ್ರಮಾಡಿ ಶಾಸಕ ಮಿಂಚಿದ್ದಾರೆ. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ರಿಂದ ಭೀಮನ ಪಾತ್ರದ ಡೈಲಾಗ್ ಹಾಗು ಹಾಡಿಗೆ ಜನರು ಫಿದಾ ಆಗಿದ್ದಾರೆ. ಇಲ್ಲಿ ಕುರುಕ್ಷೇತ್ರ ನಾಟಕ ನಡೆದಿತ್ತು. ನಾಟಕ ಉದ್ಘಾಟನೆಗೆ ಶಿವಲಿಂಗೇಗೌಡ ತೆರಳಿದ್ದರು. ಈ ವೇಳೆ, ಸ್ವತಃ ಶಾಸಕರೂ ನಾಟಕದ ಪಾತ್ರದ ಸಂಭಾಷಣೆ ಹೇಳಿದ್ದಾರೆ.
ಕೈಯಲ್ಲಿ ಗದೆ ಹಿಡಿದು ಕೌರವರ ಸಂಹಾರ ಪ್ರತಿಜ್ಞೆ ಮಾಡೋ ಸನ್ನಿವೇಶದ ಡೈಲಾಗ್ ಹಾಗು ಹಾಡು ಹೇಳಿ ಮಿಂಚಿದ್ದಾರೆ. ಶಾಸಕರ ಅಭಿನಯಕ್ಕೆ ಸಿಳ್ಳೆ ಚಪ್ಪಾಳೆಗಳ ಮೂಲಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದೆ ನಾನೂ ಪೌರಾಣಿಕ ನಾಟಕದಲ್ಲಿ ಭೀಮನ ಪಾತ್ರ ಮಾಡುತ್ತಿದ್ದೆ ಎಂದು ಹಳೆಯ ದಿನ ಮೆಲುಕು ಹಾಕಿ ಅಭಿನಯ ಮಾಡಿ ತೋರಿಸಿದ್ದಾರೆ. ಸದನದಲ್ಲಿ ತಮ್ಮ ಸ್ವಾರಸ್ಯಕರ ಮಾತಿನಿಂದ ಗಮನ ಸೆಳೆಯೋ ಶಾಸಕ, ಸದನದಲ್ಲೂ ಸೈ ನಾಟಕದ ಅಭಿನಯಕ್ಕೂ ಸೈ ಎಂದು ಮಿಂಚಿದ್ಶಿದಾರೆ.
ಇದನ್ನೂ ಓದಿ: Viral Video: ಅಬ್ಬಬ್ಬಾ! ಒಂದೇ ಬೈಕ್ನಲ್ಲಿ 9 ಜನರ ಸವಾರಿ; ವಿಡಿಯೋ ನೋಡಿ
ಇದನ್ನೂ ಓದಿ: Viral Video: ಟ್ರೆಡ್‌ಮಿಲ್ ಮೇಲೆ ವಾಕ್ ಮಾಡಿದ ಬಾತುಕೋಳಿ; ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?