ಮೊಹರಂ ಮೆರವಣಿಗೆಯಲ್ಲಿ ಮಹಾ ಸಂಚು:’ನೋವು ನಿವಾರಕ’ ಎಂದು ಇಲಿ ಪಾಷಾಣದ ಮಾತ್ರೆ ಹಂಚುತ್ತಿದ್ದ ಪಾಪಿ ಅರೆಸ್ಟ್!
ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿಕೆ ಮಾಡುವ ಮೂಲಕ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ. ಪೊಲೀಸರ ಗಸ್ತು ವೇಳೆ ಈ ಖತರ್ನಾಕ್ ಸಂಚು ಬಯಲಾಗಿದೆ. ಮುಂಬೈನ ಡೊಂಗ್ರಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪುಣೆಯ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಬೆರೆಸಿದ ಮಾತ್ರೆಗಳನ್ನು ಹಂಚುತ್ತಿದ್ದರು ಎಂದು ತಿಳಿದುಬಂದಿದೆ. ಆತನ ಬಳಿಯಿದ್ದ 14,900 ವಿಷ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮುಂಬೈ, ಜೂನ್ 28: ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಜನರಿಗೆ ವಿಷದ ಮಾತ್ರೆಗಳನ್ನು ಹಂಚಿಕೆ ಮಾಡುವ ಮೂಲಕ ಅನಾಹುತ ಸೃಷ್ಟಿಸಲು ಯತ್ನಿಸಿದ ದೊಡ್ಡ ಸಂಚೊಂದನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ. ಪೊಲೀಸರ ಗಸ್ತು ವೇಳೆ ಈ ಖತರ್ನಾಕ್ ಸಂಚು ಬಯಲಾಗಿದೆ. ಮುಂಬೈನ ಡೊಂಗ್ರಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪುಣೆಯ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯು ನೋವು ನಿವಾರಕ ಮಾತ್ರೆಗಳು ಎಂದು ಹೇಳಿ, ವಾಸ್ತವದಲ್ಲಿ ಇಲಿ ಪಾಷಾಣ ಬೆರೆಸಿದ ಮಾತ್ರೆಗಳನ್ನು ಹಂಚುತ್ತಿದ್ದರು ಎಂದು ತಿಳಿದುಬಂದಿದೆ. ಆತನ ಬಳಿಯಿದ್ದ 14,900 ವಿಷ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಷದ ಮಾತ್ರೆ ಸೇವಿಸಿದ್ದ ವ್ಯಕ್ತಿಯೊಬ್ಬರು ವಾಂತಿಭೇದಿಯಿಂದ ಅಸ್ವಸ್ಥಗೊಂಡ ನಂತರ ಈ ಸಂಚಿನ ಸುಳಿವು ಸಿಕ್ಕಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಪೊಲೀಸ ತನಿಖೆಯಿಂದ ಫಯಾಜ್ ಪ್ರೇಮ್‌ಜಿಯ ಚಟುವಟಿಕೆಗಳು ಬಯಲಾಗಿವೆ. ಪೊಲೀಸರು ಆತನ ಚೀಲದಲ್ಲಿ ಸಂಗ್ರಹಿಸಿದ್ದ ವಿಷಕಾರಿ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಿದ್ದು, ತೀವ್ರ ತನಿಖೆ ನಡೆಯುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

