ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ, ಕದಲದೆ ನಿಂತ ಆನೆಗಳು

Edited By:

Updated on: Oct 09, 2026 | 12:53 PM

ಮೈಸೂರು ದಸರಾ 2026ರ ಸಿದ್ಧತೆಗಳು ಶುರುವಾಗಿವೆ. ಗಜಪಡೆ ಮತ್ತು ಅಶ್ವಪಡೆಗಳಿಗೆ ದೊಡ್ಡಕೆರೆ ಮೈದಾನದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಗುತ್ತಿದೆ. ಆನೆಗಳಾದ ಅಭಿಮನ್ಯು, ಧನಂಜಯ, ಮಹೇಂದ್ರ ಮತ್ತು ಶ್ರೀರಾಮ ಸೇರಿದಂತೆ ಹಲವು ಆನೆಗಳಿಗೆ ಗನ್‌ ಸೌಂಡ್‌ ಮತ್ತು ಪಟಾಕಿಗಳಿಗೆ ಒಗ್ಗಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಇದು ದಸರಾ ಜಂಬೂಸವಾರಿ ಮೆರವಣಿಗೆಗೆ ಆನೆಗಳನ್ನು ಸಿದ್ಧಪಡಿಸುವ ಪ್ರಮುಖ ಹಂತವಾಗಿದೆ.

ಮೈಸೂರು, ಅಕ್ಟೋಬರ್​ 09: ಮೈಸೂರು ದಸರಾ 2026ರ ಭವ್ಯ ಆಚರಣೆಗಾಗಿ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಈ ವರ್ಷದ ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಗಜಪಡೆಗೆ ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ. ಅದರ ಪ್ರಮುಖ ಭಾಗವಾಗಿ, ದೊಡ್ಡಕೆರೆ ಮೈದಾನದಲ್ಲಿ ಸಿಡಿಮದ್ದು ತಾಲೀಮು ನಡೆದಿದೆ. ಈ ತಾಲೀಮಿನಲ್ಲಿ, ಒಟ್ಟು ಏಳು ಫಿರಂಗಿಗಳ ಮೂಲಕ ಮೂರು ಸುತ್ತುಗಳಲ್ಲಿ ಇಪ್ಪತ್ತೊಂದು ಬಾರಿ ಸಿಡಿಮದ್ದು ಸಿಡಿಸಿ, ಆನೆಗಳು ಮತ್ತು ಕುದುರೆಗಳು ಶಬ್ದಕ್ಕೆ ಹೆದರದೆ ಇರುವಂತೆ ತರಬೇತಿ ನೀಡಲಾಯಿತು. ದಸರಾ ಆನೆಗಳಾದ ಅಭಿಮನ್ಯು, ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ್, ಗೋಪಿ ಮತ್ತು ಶ್ರೀರಾಮ ಒಳಗೊಂಡ ಗಜಪಡೆ ಈ ತಾಲೀಮಿನಲ್ಲಿ ಭಾಗಿಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More