Namma Metro: ಹೇಗಿದೆ ನೋಡಿ ಮೊದಲ ಚಾಲಕ ರಹಿತ ನಮ್ಮ ಮೆಟ್ರೋ ರೈಲು
ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದಿಳಿದ ಚಾಲಕ ರಹಿತ ಮೆಟ್ರೋ ರೈಲಿನ ವಿಡಿಯೋವನ್ನು ಬಿಎಂಆರ್ಸಿಎಲ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದೆ. ರೈಲಿನ ಮೇಲಿದ್ದ ಹೊದಿಕೆಯನ್ನು ತೆಗೆದು ಟ್ರ್ಯಾಕ್ ಗೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್.ವಿ ರೋಡ್ ಟೂ ಬೊಮ್ಮಸಂದ್ರ ಮಾರ್ಗದಲ್ಲಿ ಟ್ರಯಲ್ ರನ್ ಮಾಡಲಾಗುತ್ತೆ.
ಬೆಂಗಳೂರು, ಫೆ.20: ನಮ್ಮ ಮೆಟ್ರೋ (Namma Metro) ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಮಾರ್ಗಗಳ ವಿಸ್ತರಣೆ ಕೂಡಾ ಆಗುತ್ತಿದೆ. ಲಕ್ಷಾಂತರ ಜನಕ್ಕೆ ನಮ್ಮ ಮೆಟ್ರೋದಿಂದ ಅನುಕೂಲ ಆಗಿದೆ. ಹೀಗಾಗಿರುವಾಗಲೇ ನಮ್ಮ ಮೆಟ್ರೋ ಸಾಕಷ್ಟು ಅಪ್ ಗ್ರೇಡ್ ಆಗುತ್ತಿದೆ. ಶೀಘ್ರದಲ್ಲೇ ನಮ್ಮ ಮೆಟ್ರೋ ಹಳಿಗಳ ಮೇಲೆ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ಮಾಡಲಿದೆ (Driverless Metro). ಸದ್ಯ ಬಿಎಂಆರ್ಸಿಎಲ್ ಡ್ರೈವರ್ಲೆಸ್ ರೈಲಿನ ಫೋಟೋ, ವಿಡಿಯೋ ಬಿಡುಗಡೆ ಮಾಡಿದೆ.
ಚಾಲಕ ರಹಿತ ಮೆಟ್ರೋ ರೈಲು ಹೇಗಿರಲಿದೆ ಎಂಬ ಕುತೂಹಲಕ್ಕೆ ಬಿಎಂಆರ್ಸಿಎಲ್ ತೆರೆ ಎಳೆದಿದೆ. ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ 6 ರೈಲಿನ ಕೋಚ್‌ಗಳು ಸುರಕ್ಷಿತವಾಗಿ ತಲುಪಿವೆ. ಸದ್ಯ ರೈಲಿನ ಮೇಲಿದ್ದ ಹೊದಿಕೆಯನ್ನು ತೆಗೆದು ಟ್ರ್ಯಾಕ್ ಗೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್.ವಿ ರೋಡ್ ಟೂ ಬೊಮ್ಮಸಂದ್ರ ಮಾರ್ಗದಲ್ಲಿ ಟ್ರಯಲ್ ರನ್ ಮಾಡಲಾಗುತ್ತೆ.
ಲೆಕ್ಟ್ರಾನಿಕ್ ಸಿಟಿ ಮೆಟ್ರೋ ಮಾರ್ಗಕ್ಕಾಗಿ ಚೀನಾದಿಂದ ಈ ರೈಲಿನ ಬೋಗಿಗಳನ್ನು ತರಿಸಲಾಗಿದೆ.ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದ್ದು, ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ. ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ