ಕಾಂಗ್ರೆಸ್ ಯೋಗ್ಯತೆ ಏನು ಅಂತ ದೇಶಕ್ಕೆ ಗೊತ್ತು, ಇದು ರಾಜಕೀಯ ಮಾಡುವ ಸಮಯವಲ್ಲ: ಯದುವೀರ್ ಕೃಷ್ಣದತ್ತ ಒಡೆಯರ್

Updated on: Apr 26, 2025 | 3:00 PM

ಕಾಂಗ್ರೆಸ್ ಪಕ್ಷದವರ ಯೋಗ್ಯತೆ ಏನು ಅಂತ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ, ಅದು ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನೆ ತಾಂಡವಾಡುತಿತ್ತು, 26/11 ನಡೆದಿದ್ದು ಯಾವಾಗ? ಆಗ ಎಷ್ಟು ಜನ ಪ್ರಾಣ ಕಳೆದುಕೊಂಡರು ಅನ್ನೋದು ಭಾರತೀಯರಿಗೆ ಗೊತ್ತಿಲ್ಲವೇ? ಪಹಲ್ಗಾಮ್ ನಲ್ಲಿ ನಡೆದ ಘಟನೆ ರಾಜಕೀಯ ಮಾಡುವ ವಿಚಾರವಲ್ಲ ಅನ್ನೋದು ಕೂಡ ಕಾಂಗ್ರೆಸ್ ಗೆ ಗೊತ್ತಿಲ್ಲ ಎಂದು ಯದುವೀರ್ ಹೇಳಿದರು.

ಮೈಸೂರು, ಏಪ್ರಿಲ್ 26: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ (Yaduveer Krishna Dutt Wodeyar), ಮಂಗಳವಾರದಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಭದ್ರತೆ ಲೋಪ ಕಾರಣವೋ ಇಲ್ಲವೋ ಅನ್ನೋದು ಪರಿಶೀಲನೆ ನಡೆದ ನಂತರ ಗೊತ್ತಾಗುತ್ತದೆ, ಆದರೆ ಸದ್ಯಕ್ಕೆ ನಾವು ಪಾಕಿಸ್ತಾನ ಬೆಚ್ಚಿ ಬೀಳುವ ಪ್ರತಿಕ್ರಿಯೆ ನೀಡಬೇಕಿದೆ, ಅದನ್ನು ನಮ್ಮ ವರಿಷ್ಠರು ಮಾಡುತ್ತಿದ್ದಾರೆ, ಭಾರತೀಯರೆಲ್ಲ ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸಬೇಕಿದೆ ಮತ್ತು ವೈರಿಯ ಹುಟ್ಟಡಗಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:  ಹಣಕಾಸಿನ ಸಹಾಯ ಮಾಡಿ; ಮಹಾರಾಷ್ಟ್ರ ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ