AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET-PG Exam 2026: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ, ಪ್ರಶ್ನೆಗಳ ಸಂಖ್ಯೆ 200 ರಿಂದ 180 ಕ್ಕೆ ಇಳಿಕೆ

NEET-PG Exam 2026: ನೀಟ್-ಪಿಜಿ 2026 ಪರೀಕ್ಷೆಗೆ ಸಂಪೂರ್ಣ ಸಿದ್ಧತೆ, ಪ್ರಶ್ನೆಗಳ ಸಂಖ್ಯೆ 200 ರಿಂದ 180 ಕ್ಕೆ ಇಳಿಕೆ

ನಯನಾ ರಾಜೀವ್
|

Updated on: Aug 28, 2026 | 10:15 AM

Share

ನೀಟ್-ಪಿಜಿ (NEET-PG 2026) ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಎನ್‌ಬಿಇಎಂಎಸ್ (NBEMS) ಸಂಪೂರ್ಣವಾಗಿ ಸಜ್ಜಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಅಭಿಜತ್ ಶೇಠ್ ತಿಳಿಸಿದ್ದಾರೆ. ಪರೀಕ್ಷೆಯು ಆಗಸ್ಟ್ 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.

ನವದೆಹಲಿ, ಆಗಸ್ಟ್ 28:ನೀಟ್-ಪಿಜಿ (NEET-PG 2026) ಪರೀಕ್ಷೆಯನ್ನು ಅತ್ಯಂತ ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಮತ್ತು ಎನ್‌ಬಿಇಎಂಎಸ್ (NBEMS) ಸಂಪೂರ್ಣವಾಗಿ ಸಜ್ಜಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಅಭಿಜತ್ ಶೇಠ್ ತಿಳಿಸಿದ್ದಾರೆ. ಪರೀಕ್ಷೆಯು ಆಗಸ್ಟ್ 30ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ನಡೆಯಲಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಪ್ರಶ್ನೆಗಳ ಸಂಖ್ಯೆಯನ್ನು 200 ರಿಂದ 180 ಕ್ಕೆ ಇಳಿಸಲಾಗಿದೆ. ಪರೀಕ್ಷೆಗೆ ಒಟ್ಟು 2,73,182 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಅವರಲ್ಲಿ 2,73, 082 ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರ ವಿತರಿಸಲಾಗಿದೆ.

ಒಟ್ಟು ಪರೀಕ್ಷಾ ಸಮಯವನ್ನು ಬದಲಾಯಿಸದೆ, ವಿದ್ಯಾರ್ಥಿಗಳಿಗೆ ಪ್ರತಿ ಪ್ರಶ್ನೆಗೆ ಉತ್ತರಿಸಲು ಹೆಚ್ಚಿನ ಸಮಯಾವಕಾಶ ಕಲ್ಪಿಸುವ ಉದ್ದೇಶದಿಂದ ಪ್ರಶ್ನೆಗಳ ಸಂಖ್ಯೆಯನ್ನು 180 ಕ್ಕೆ ಸೀಮಿತಗೊಳಿಸಲಾಗಿದೆ.
ಪರೀಕ್ಷೆಯು 5 ಪ್ರತ್ಯೇಕ ವಿಭಾಗಗಳಲ್ಲಿ (ಪ್ರತಿ ವಿಭಾಗಕ್ಕೆ 36 ಪ್ರಶ್ನೆಗಳು ಹಾಗೂ 42 ನಿಮಿಷ) ನಡೆಯಲಿದ್ದು, ಕಟ್ಟುನಿಟ್ಟಾದ ಸಮಯ ಮಿತಿಯನ್ನು ಹೊಂದಿರುತ್ತದೆ.

ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ನೈಜ-ಸಮಯದ ಸಿಸಿಟಿವಿ ಕಣ್ಗಾವಲು ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಪರಿಶೀಲನಾ ವ್ಯವಸ್ಥೆಯನ್ನು ಕೇಂದ್ರಗಳಲ್ಲಿ ಅಳವಡಿಸಲಾಗಿದೆ. ಯಾವುದೇ ಮಧ್ಯವರ್ತಿಗಳು ಅಥವಾ ವದಂತಿಗಳಿಗೆ ಕಿವಿಗೊಡದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us