ಶಿವಕುಮಾರ್​ರನ್ನು ಪ್ರತ್ಯೇಕಿಸಿಲ್ಲ, ಅವರು ಸಮರ್ಥ ನಾಯಕ ಮತ್ತು ರಾಜಕೀಯ ಜ್ಞಾನ ಚೆನ್ನಾಗಿದೆ: ಪರಮೇಶ್ವರ್

Updated on: Aug 30, 2025 | 12:59 PM

ಪರಮೇಶ್ವರ್ ಉತ್ತರದಿಂದ ಸಮಾಧಾನಗೊಳ್ಳದ ಮಾಧ್ಯಮದವರು ಪುನಃ ಅದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ, ಸಿಡಿಮಿಡಿಗೊಳ್ಳುವ ಅವರು ಬೇರೆ ಏನಾದರೂ ಇದ್ದರೆ ಕೇಳಿ ಅನ್ನುತ್ತಾ ದುರ್ದಾನ ತೆಗೆದುಕೊಂಡವರಂತೆ ಅಲ್ಲಿಂದ ಹೊರಡುತ್ತಾರೆ. ಸಾಮಾನ್ಯವಾಗಿ ಮಾಧ್ಯಮದವರು ಇಕ್ಕಟ್ಟಿನ ಪ್ರಶ್ನೆ ಕೇಳಿದರೂ ಸಮಾಧಾನ ಚಿತ್ತದಿಂದ ಉತ್ತರ ನೀಡುವ ಪರಮೇಶ್ವರ್ ಇವತ್ತು ಪತ್ರಕರ್ತರಿಗೆ ಬೆನ್ನುಹಾಕಿ ಹೋಗಿದ್ದು ಆಶ್ಚರ್ಯ ಹುಟ್ಟಿಸುತ್ತದೆ.

ಬೆಂಗಳೂರು, ಆಗಸ್ಟ್ 30: ಬಿಹಾರದಲ್ಲಿ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ರಾಹುಲ್ ಗಾಂಧಿ (Rahul Gandhi) ವೋಟ್ ಅಧಿಕಾರ್ ಱಲಿ ನಡೆಸುತ್ತಿದ್ದು ನಿನ್ನೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಸೇರಿದಂತೆ ಕೆಲ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಗೈರು ಹಾಜರಿ ಎದ್ದುಕಾಣುತ್ತಿತ್ತು. ಅವರನ್ನು ಯಾಕೆ ಪ್ರತ್ಯೇಕಿಸಿದ್ದು ಅಂತ ಪರಮೇಶ್ವರ್ ಅವರನ್ನು ಕೇಳಿದರೆ, ಐಸೋಲೇಟ್ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ, ಅವರು ರಾಜ್ಯದ ಮುಖ್ಯಮಂತ್ರಿ ಅನ್ನೋದಕ್ಕಿಂತ ಹೆಚ್ಚಾಗಿ ಪಕ್ಷದ ರಾಜ್ಯಾಧ್ಯಕ್ಷರು, ಅವರು ಸಮರ್ಥರು ಮತ್ತು ರಾಜಕೀಯ ಜ್ಞಾನ ಚೆನ್ನಾಗಿದೆ, ಬೇರೆ ಯಾರೋ ಏನನ್ನೋ ಹೇಳಿದರೆ ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ:  Dharmasthala Mask Man arrested; ತನಿಖೆ ಪೂರ್ಣಗೊಂಡು ವರದಿ ಕೈಸೇರುವವರೆಗೆ ಏನನ್ನೂ ಹೇಳಲ್ಲ: ಪರಮೇಶ್ವರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ