ಬಳ್ಳಾರಿ ಜೈಲಲ್ಲಿ ದರ್ಶನ್ಗೆ ಮೂರನೇ ದಿನ, ಪರಿಶೀಲನೆಗೆ ಆಗಮಿಸಿದ ಉತ್ತರ ವಲಯ ಡಿಐಜಿ ಟಿಪಿ ಶೇಷ
ಶುಕ್ರವಾರದಂದೇ ದರ್ಶನ್ ವಿಷಯದಲ್ಲಿ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಡಿಐಜಿ ಟಿಪಿ ಶೇಷ ಜೈಲಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದರು ಮತ್ತು ಅವುಗಳ ಪಾಲನೆ ಬಗ್ಗೆ ಫಸ್ಟ್ ಹ್ಯಾಂಡ್ ಮಾಹಿತಿ ಸಂಗ್ರಹಿಸಲು ಇಂದು ಜೈಲಿಗೆ ಭೇಟಿ ನೀಡಿದ್ದರು.
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಸಾಗಹಾಕಿ ಇವತ್ತಿಗೆ ಮೂರನೇ ದಿನ. ಬಳ್ಳಾರಿ ಜೈಲು ಹೇಗೆ ಅಂತ ಈಗಾಗಲೇ ಅವರಿಗೆ ಮನವರಿಕೆಯಾಗಿರಬಹುದು. ಇವತ್ತು ಬೆಳಗ್ಗೆ ಉತ್ತರ ವಲಯ ಡಿಐಜಿ ಟಿಪಿ ಶೇಷ ಜೈಲಿಗೆ ಭೇಟಿ ನೀಡಿ ದರ್ಶನ್ ಗಾಗಿ ಜೈಲಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಅವರು ಜೈಲಿಗೆ ಬಂದಾಗ ಅಲ್ಲಿನ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ತೂಗುದೀಪ: ಬಳ್ಳಾರಿ ಜೈಲಲ್ಲಿ ಹಸ್ತಲಾಘವಕ್ಕಾಗಿ ದರ್ಶನ್ ಕೈ ಚಾಚಿದಾಗ ಅಧಿಕಾರಿಯೊಬ್ಬರು ‘ನೋ’ ಅಂದರು!