ಫ್ಲ್ಯಾಗ್​ಶಿಪ್ ಡಿವೈಸ್ ಆಗಿ ವನ್​ಪ್ಲಸ್ 10 ಪ್ರೋ ಮುಂದಿನ ವರ್ಷ ಮಧ್ಯಭಾಗದ ಹೊತ್ತಿಗೆ ಲಾಂಚ್ ಆಗಲಿದೆ

ವನ್ ಪ್ಲಸ್ 10 ಪ್ರೋ ದೀರ್ಘ ಪಾಲುದಾರಿಕೆಯ ಭಾಗವಾಗಿ ಹ್ಯಾಸೆಲ್ ಬ್ಲ್ಯಾಡ್ ಕ್ಯಾಮೆರಾಗಳನ್ನು ಹೊಂದಿರಲಿದೆ. ಅದರೊಂದಿಗೆ, ವನ್ ಪ್ಲಸ್ 10 ಪ್ರೋ ನಲ್ಲಿ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್‌ನಲ್ಲಿ ನಾವು ಸುಧಾರಣೆಯನ್ನು ಕಾಣಬಹುದು.

ಈ ವರ್ಷದ ನವೆಂಬರ್ ನಲ್ಲೇ ವನ್ ಪ್ಲಸ್ ಸಂಸ್ಥೆಯು ಹೊಸ ವರ್ಷವನ್ನು ಹೇಗೆ ಸ್ವಾಗತಿಸಬೇಕೆನ್ನುವ ತಯಾರಿ ಮಾಡಿಕೊಂಡಂತಿದೆ. ಈ ವರ್ಷದ ಎಲ್ಲ ಉತ್ಪಾದನೆಗಳನ್ನು ಅದು ಲಾಂಚ್ ಮಾಡಿಯಾಗಿದೆ. ಸಂಸ್ಥೆಯ ಮುಂದಿನ ಫ್ಲ್ಯಾಗ್ ಶಿಪ್ ಫೋನ್ 2022 ರಲ್ಲೇ ಲಾಂಚ್ ಆಗಲಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವನ್ ಪ್ಲಸ್ 10 ಪ್ರೋ ಮುಂದಿನ ವರ್ಷದ ಮಧ್ಯಭಾಗದ ಹೊತ್ತಿಗೆ ಲಾಂಚ್ ಆಗಲಿದೆ. ಹೊಸ ಫೋನಿನ ಬಗ್ಗೆ ಸಾಕಷ್ಟು ಮಾಹಿತಿ ಲೀಕ್ ಅಗಿದೆ. ಆ ಫೋನಿನ ಲುಕ್ಸ್ ಬಹಳ ಭಿನ್ನವಾಗಿವೆ. ಹಿಂಭಾಗದ ಕೆಮೆರಾಗಳನ್ನು ಫ್ರೇಮಿನ ಹಾಗೆ ವಿನ್ಯಾಸಗೊಳಿಸಲಾಗಿದೆ. ಕೆಮೆರಾ ಸಮೂಹದಲ್ಲಿ ಮೂರು ಕೆಮೆರಾಗಳಿದ್ದು ಎಲ್ ಇ ಡಿ ಫ್ಲ್ಯಾಶ್ ಸಹ ಅಳವಡಿಸಲಾಗಿದೆ.

ವನ್ ಪ್ಲಸ್ 10 ಪ್ರೋ ಟಾಪ್-ಆಫ್-ಲೈನ್ ಹಾರ್ಡ್‌ವೇರ್‌ನೊಂದಿಗೆ ಲಭ್ಯವಾಗಲಿದೆ ಅನ್ನುವುದನ್ನು ಸುಲಭವಾಗಿ ಊಹಿಸಬಹುದು. ಲೀಕ್ ಆಗಿರುವ ಮಾಹಿತಿಯ ಪ್ರಕಾರ, ವನ್ ಪ್ಲಸ್ 10 ಪ್ರೋ 6.7-ಇಂಚಿನ ಎಲ್ ಟಿ ಪಿ ಒ ಅಮೋಲೆಡ್ ಡಿಸ್ಪ್ಲೇಯನ್ನು 120 ಎಚ್ ಜೆಡ್ ಹೆಚ್ಚಿನ ರಿಫ್ರೆಶ್ ಗತಿಯೊಂದಿಗೆ ಬೆಂಬಲಿಸುತ್ತದೆ. ಮಾಹಿತಿಯ ಪ್ರಕಾರ ಸ್ನಾಪ್‌ಡ್ರಾಗನ್ 898 ಚಿಪ್‌ಸೆಟ್ ಇದಕ್ಕೆ ಬಲ ನೀಡಬಹುದು.

ಜೊತೆಗೆ, ವನ್ ಪ್ಲಸ್ 10 ಪ್ರೋ ದೀರ್ಘ ಪಾಲುದಾರಿಕೆಯ ಭಾಗವಾಗಿ ಹ್ಯಾಸೆಲ್ ಬ್ಲ್ಯಾಡ್ ಕ್ಯಾಮೆರಾಗಳನ್ನು ಹೊಂದಿರಲಿದೆ. ಅದರೊಂದಿಗೆ, ವನ್ ಪ್ಲಸ್ 10 ಪ್ರೋ ನಲ್ಲಿ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್‌ನಲ್ಲಿ ನಾವು ಸುಧಾರಣೆಯನ್ನು ಕಾಣಬಹುದು. ಇದು ವನ್ ಪ್ಲಸ್ 10 ಪ್ರೋ ಬಗ್ಗೆ ಸೋರಿದ ಮಾಹಿತಿ ಪ್ರಕಾರ ಸಂಕ್ಷಿಪ್ತ ಪರಿಚಯವಾಗಿದ್ದರೂ, ಇದರ ಫೀಚರ್ಸ್ ಸಾಕಷ್ಟಿವೆ ಎಂದು ಹೇಳಲಾಗಿದೆ.

ನಿಸ್ಸಂದೇಹವಾಗಿ, ವನ್ ಪಲ್ಸ್ ಪ್ರೋ 2022 ರಲ್ಲಿ ಕಂಪನಿಯ ಫ್ಲ್ಯಾಗ್ ಶಿಪ್ ಡಿವೈಸ್ ಆಗಲಿದೆ. ಹಾಗೆ ನೋಡಿದರೆ ಹೊಸ ಫೋನಿನ ಬೆಲೆ ಎಷ್ಟಿರಬಹುದೆನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕಂಪನಿಯ ಹಿಂದಿನ ಟ್ರೆಂಡ್ಗಳನ್ನು ಗಮನಿಸಿದ್ದೇಯಾದರೆ, ಬೆಲೆ ಖಂಡಿತವಾಗಿಯೂ ಹೆಚ್ಚಿರಲಿದೆ.

ನಿಮಗೆ ಗೊತ್ತಿರುವ ಹಾಗೆ ವನ್ ಪ್ಲಸ್ ಪ್ರೋ 9 ಲಾಂಚ್ ಮಾಡಿದಾಗ ಅದರ ಆರಂಭಿಕ ಬೆಲೆ ರೂ. 49,999 ಆಗಿತ್ತು ಮತ್ತು ವನ್ ಪ್ಲಸ್ 9 ಪ್ರೊ ಬೆಲೆ 64,999 ಆಗಿತ್ತು. ಈ ಹಿನ್ನೆಲೆಯಿಂದ ನೋಡಿದ್ದೇಯಾದರೆ, ವನ್ ಪ್ಲಸ್ ಪ್ರೋ 10 ಬೆಲೆ 69,999 ರಿಂದ ಆರಂಭವಾಗಬಹುದು.

ಇದನ್ನೂಓದಿ:   ಟಾಸ್ ವೇಳೆ ಕೊಹ್ಲಿ ನಬಿಗೆ ಬೌಲಿಂಗ್ ಆಯ್ಕೆ ಮಾಡುವಂತೆ ಹೇಳಿದ್ರಾ? ಈ ವಿಡಿಯೋ ಅಸಲಿಯತ್ತೇನು?

Click on your DTH Provider to Add TV9 Kannada