AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರ್ಗಿಸ್ತಾನದ ಎಸ್‌ಸಿಒ ಶೃಂಗಸಭೆಯಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

ಕಿರ್ಗಿಸ್ತಾನದ ಎಸ್‌ಸಿಒ ಶೃಂಗಸಭೆಯಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

ಸುಷ್ಮಾ ಚಕ್ರೆ
|

Updated on: Aug 31, 2026 | 3:29 PM

Share

ಭಾರತ ಮತ್ತು ಅರ್ಮೇನಿಯಾ ನಡುವೆ ರಕ್ಷಣಾ ಸಹಕಾರವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದೆ. ಭಾರತದ ಸ್ವದೇಶಿ ನಿರ್ಮಿತ ಪಿನಾಕ ರಾಕೆಟ್ ಲಾಂಚರ್ ವ್ಯವಸ್ಥೆ, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಸ್ವಾತಿ ವೆಪನ್ ಲೊಕೇಟಿಂಗ್ ರೇಡಾರ್, ATAGS ಅಟಾಕ್ಸ್ ಫಿರಂಗಿ ಹಾಗೂ ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ಅರ್ಮೇನಿಯಾ ಭಾರತದಿಂದ ಖರೀದಿ ಮಾಡಿದ್ದು, ಈ ಒಪ್ಪಂದಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ನಾಯಕರು ಚರ್ಚಿಸಿದರು. ಅರ್ಮೇನಿಯಾ ಪ್ರಧಾನಿ ಪಶಿನಿಯಾನ್ ಅವರು ಭಾರತದ ಪ್ರಧಾನಿ ಮೋದಿಯವರನ್ನು ಅರ್ಮೇನಿಯಾಗೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

ಬಿಷ್ಕೆಕ್, ಆಗಸ್ಟ್ 31: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಸ್ಥೆ (SCO Summit) ಶೃಂಗಸಭೆಯ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಅರ್ಮೇನಿಯಾ ಪ್ರಧಾನಮಂತ್ರಿ ನಿಕೋಲ್ ಪಶಿನಿಯಾನ್ (Nikol Pashinyan) ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಭೆಯಲ್ಲಿ ಉಭಯ ನಾಯಕರು ರಕ್ಷಣೆ, ಆರ್ಥಿಕತೆ, ಡಿಜಿಟಲ್ ತಂತ್ರಜ್ಞಾನ, ಔಷಧ (ಫಾರ್ಮಾ), ಶಿಕ್ಷಣ, ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಭಾರತ ಮತ್ತು ಅರ್ಮೇನಿಯಾ ನಡುವೆ ರಕ್ಷಣಾ ಸಹಕಾರವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಬೆಳೆದಿದೆ. ಭಾರತದ ಸ್ವದೇಶಿ ನಿರ್ಮಿತ ಪಿನಾಕ ರಾಕೆಟ್ ಲಾಂಚರ್ ವ್ಯವಸ್ಥೆ, ಆಕಾಶ್ ವಾಯು ರಕ್ಷಣಾ ವ್ಯವಸ್ಥೆ, ಸ್ವಾತಿ ವೆಪನ್ ಲೊಕೇಟಿಂಗ್ ರೇಡಾರ್, ATAGS ಅಟಾಕ್ಸ್ ಫಿರಂಗಿ ಹಾಗೂ ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ಅರ್ಮೇನಿಯಾ ಭಾರತದಿಂದ ಖರೀದಿ ಮಾಡಿದ್ದು, ಈ ಒಪ್ಪಂದಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ನಾಯಕರು ಚರ್ಚಿಸಿದರು. ಅರ್ಮೇನಿಯಾ ಪ್ರಧಾನಿ ಪಶಿನಿಯಾನ್ ಅವರು ಭಾರತದ ಪ್ರಧಾನಿ ಮೋದಿಯವರನ್ನು ಅರ್ಮೇನಿಯಾಗೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us