ನಮೋ ಫಾರ್ ವಿಕಸಿತ ಭಾರತ ಕಾರ್ಯಕ್ರಮ: ವಡೋದರಾದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಡೋದರಾದ 'ನಮೋ ಫಾರ್ ವಿಕಸಿತ ಭಾರತ್' ಕಾರ್ಯಕ್ರಮದಲ್ಲಿ ಬೃಹತ್ ಜನಸ್ತೋಮದಿಂದ ಅದ್ಧೂರಿ ಸ್ವಾಗತ ದೊರೆಯಿತು. ಈ ಭೇಟಿಯ ವೇಳೆ ದೇಶದ ಸರಕು ಸಾಗಣೆ ಜಾಲವನ್ನು ಬಲಪಡಿಸಲು ಸುಮಾರು 20,700 ಕೋಟಿ ರೂ. ವೆಚ್ಚದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ನ (WDFC) ಮೂರು ಪ್ರಮುಖ ವಿಭಾಗಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ವಡೋದರಾ, ಸೆಪ್ಟೆಂಬರ್ 08: ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಡೋದರಾದ ‘ನಮೋ ಫಾರ್ ವಿಕಸಿತ ಭಾರತ್’ ಕಾರ್ಯಕ್ರಮದಲ್ಲಿ ಬೃಹತ್ ಜನಸ್ತೋಮದಿಂದ ಅದ್ಧೂರಿ ಸ್ವಾಗತ ದೊರೆಯಿತು. ಈ ಭೇಟಿಯ ವೇಳೆ ದೇಶದ ಸರಕು ಸಾಗಣೆ ಜಾಲವನ್ನು ಬಲಪಡಿಸಲು ಸುಮಾರು 20,700 ಕೋಟಿ ರೂ. ವೆಚ್ಚದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ನ (WDFC) ಮೂರು ಪ್ರಮುಖ ವಿಭಾಗಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.
ಒಟ್ಟು 326 ಕಿ.ಮೀ. ವ್ಯಾಪ್ತಿಯ ಸನಂದ್-ಮಕರಪುರ, ನ್ಯೂ ಉಂಬರ್ಗಾಂವ್-ನ್ಯೂ ಸಫಲೆ ಮತ್ತು ನ್ಯೂ ಸಫಲೆ-ಜೆಎನ್ಪಿಟಿ ಮಾರ್ಗಗಳು ಇದರಲ್ಲಿ ಸೇರಿವೆ. ಈ ಕಾರಿಡಾರ್ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ನೇರವಾಗಿ ಬಂದರುಗಳಿಗೆ ಜೋಡಿಸಲಿದ್ದು, ಸರಕು ಸಾಗಣೆ ವೆಚ್ಚ ಮತ್ತು ಸಮಯವನ್ನು ಗಣನೀಯವಾಗಿ ತಗ್ಗಿಸಲಿದೆ. ಇದರೊಂದಿಗೆ ಜಾಗತಿಕ ಫಿನ್ಟೆಕ್ ಉತ್ಸವಕ್ಕೂ ಪ್ರಧಾನಿ ಚಾಲನೆ ನೀಡಲಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸ್ಟಿಂಗ್ ಆಪರೇಷನ್: CCB ವಿಚಾರಣೆಗೆ ಬಂದ ಕೃಪಾ ಆಳ್ವಾ; ವಕೀಲೆ ಹೇಳಿದ್ದೇನು?
ರಾಜ್ಯ ಸರ್ಕಾರ ಮತ್ತು ರಾಜಮನೆತನದ ನಡುವಿನ ಸಂಘರ್ಷಕ್ಕೆ ಯದುವೀರ್ ರಿಯಾಕ್ಷನ್
ಸ್ಪರ್ಧಿಗಳಿಗೆ ಹೊರಗಿನ ವಿಷಯ ರಿವೀಲ್ ಮಾಡಿದ ಮಂಜು; ಇಡೀ ಮನೆ ಅಲ್ಲೋಲ ಕಲ್ಲೋಲ
ಮಂಡ್ಯದ ಚಿನಕುರಳಿ ಗ್ರಾಮದಲ್ಲಿ ಭೀಕರ ಅಗ್ನಿ ಅವಘಡ; ಭಸ್ಮವಾದ ಮೂರು ಅಂಗಡಿಗಳು

