‘ಕಿರಾತಕ’ ನಿರ್ದೇಶಕ ಪ್ರದೀಪ್ ರಾಜ್‌ ಹಾಡಿದ ಕೊನೆಯ ಹಾಡು

| Updated By: ರಾಜೇಶ್ ದುಗ್ಗುಮನೆ

Updated on: Jan 20, 2022 | 5:03 PM

ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ದೇಹದಲ್ಲಿ ಇನ್​ಫೆಕ್ಷನ್​ ಆಯಿತು. ಈಗ ಕೊವಿಡ್​ನಿಂದ ಅವರು ಮೃತಪಟ್ಟರು. ಅವರು ಹಾಡಿರುವ ಕೊನೆಯ ಹಾಡು ಈಗ ವೈರಲ್​ ಆಗುತ್ತಿದೆ.

ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿ ಫೇಮಸ್​ ಆಗಿದ್ದ ನಿರ್ದೇಶಕ ಪ್ರದೀಪ್​ ರಾಜ್​ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಕುಟುಂಬದ ಸದಸ್ಯರು ಖಚಿತಪಡಿಸಿದ್ದಾರೆ. ಪ್ರದೀಪ್​ ರಾಜ್​ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕಳೆದ 6 ತಿಂಗಳಿನಿಂದ ಪ್ರದೀಪ್​ ರಾಜ್​ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಅವರಿಗೆ ಲಿವರ್​ ಸಮಸ್ಯೆ ಆಗಿತ್ತು. ಅನೇಕ ಆಸ್ಪತ್ರೆಗಳಿಗೆ ತೋರಿಸಲಾಗಿತ್ತು. ಕಳೆದ 15 ವರ್ಷದಿಂದಲೂ ಅವರಿಗೆ ಡಯಾಬಿಟಿಸ್​ ಇತ್ತು. ಕೊರೊನಾ ಲಾಕ್​ಡೌನ್​ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ದೇಹದಲ್ಲಿ ಇನ್​ಫೆಕ್ಷನ್​ ಆಯಿತು. ಈಗ ಕೊವಿಡ್​ನಿಂದ ಅವರು ಮೃತಪಟ್ಟರು. ಅವರು ಹಾಡಿರುವ ಕೊನೆಯ ಹಾಡು ಈಗ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ನಾಗ ಚೈತನ್ಯ ತುಂಬಾನೇ ಮುಗ್ಧ ಎಂದು ಹೊಗಳಿದ್ದ ಸಮಂತಾ; ವೈರಲ್​ ಆಗುತ್ತಿದೆ ಹಳೆಯ ವಿಡಿಯೋ 

Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ​ ನಿರ್ದೇಶಕ ಪ್ರದೀಪ್​ ರಾಜ್​ ನಿಧನ