ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?: ಕುತೂಹಲಕಾರಿ ವಿಷಯ ಹಂಚಿಕೊಂಡ ಸಚಿವ ಡಾ. ಯತೀಂದ್ರ

Edited By:

Updated on: Oct 14, 2026 | 5:47 PM

ಮೈಸೂರು ದಸರಾ ಜಂಬೂಸವಾರಿಗೆ 54 ವರ್ಷದ ಪ್ರಶಾಂತ್ ಆನೆಯನ್ನು ಅಂಬಾರಿ ಹೊರುವ ಆನೆಯಾಗಿ ಆಯ್ಕೆ ಮಾಡಲಾಗಿದೆ. ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡಿದ್ದು, ಆನೆಯ ಆರೋಗ್ಯ, ಸಾಮರ್ಥ್ಯ, ವರ್ತನೆ, ಮತ್ತು ಭಾರ ಹೊರುವ ಪರೀಕ್ಷೆ ಸೇರಿದಂತೆ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿದ್ದಾರೆ. ಧನಂಜಯ, ಅಭಿಮನ್ಯು ಸೇರಿದಂತೆ ಇತರೆ ಆನೆಗಳ ಪಾತ್ರಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

ಮೈಸೂರು, ಅ.14: ದಸರಾ ಮಹೋತ್ಸವದ ಜಂಬೂಸವಾರಿಗೆ ಈ ವರ್ಷ 54 ವರ್ಷದ ಪ್ರಶಾಂತ್ ಆನೆಯನ್ನು ಅಂಬಾರಿ ಹೊರುವ ಪ್ರಮುಖ ಆನೆಯಾಗಿ ಆಯ್ಕೆ ಮಾಡಲಾಗಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಂಬಾರಿ ಆನೆಗಳ ಆಯ್ಕೆ ಪ್ರಕ್ರಿಯೆಯು ಅತ್ಯಂತ ಕಠಿಣ ಮಾನದಂಡಗಳನ್ನು ಆಧರಿಸಿದೆ ಎಂದು ಅವರು ವಿವರಿಸಿದರು. ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ವರ್ತನೆ, ಮತ್ತು ಬೆನ್ನಿನ ಆಕಾರವನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಅಂಬಾರಿ ಆನೆಯು ಬಹಳ ಶಾಂತ ಸ್ವಭಾವದಾಗಿರಬೇಕು. ತರಬೇತಿ ಸಮಯದಲ್ಲಿ 700ರಿಂದ 1000 ಕೆ.ಜಿ. ತೂಕದ ಮರಳು ಮೂಟೆಗಳನ್ನು ಹೊರಿಸಿ ಅದರ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದಲ್ಲದೆ, ಜನಸಂದಣಿ, ವಾದ್ಯಗೋಷ್ಠಿಗಳು ಮತ್ತು ಪಟಾಕಿಗಳ ಸದ್ದಿಗೆ ಆನೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನೂ ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಧನಂಜಯ ಆನೆಯನ್ನು ಮೀಸಲು ಅಂಬಾರಿ ಆನೆಯಾಗಿ ನಿಗದಿಪಡಿಸಲಾಗಿದೆ. ಕಳೆದ ವರ್ಷ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಯನ್ನು ನಿಶಾನೆ ಆನೆಯಾಗಿ, ಗೋಪಿ ಆನೆಯನ್ನು ನೌಫತ್ ಆನೆಯಾಗಿ ನಿಯೋಜಿಸಲಾಗಿದೆ. ಮಹೇಂದ್ರ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ, ಸುಗ್ರೀವ, ಏಕಲವ್ಯ, ರೂಪಾ ಮತ್ತು ಚೈತ್ರ ಸೇರಿದಂತೆ ಇತರೆ ಆನೆಗಳು ಸಹ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುತ್ತವೆ. ಈ ಆನೆಗಳ ಪಾತ್ರಗಳು ಮತ್ತು ಅವುಗಳ ಮೆರವಣಿಗೆಯ ಕ್ರಮವನ್ನು ಸಹ ವಿವರಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More