‘ಪ್ಯಾರಡೈಸ್’ ಸೋಲು: ‘ಮಾರ್ಟಿನ್’ ದಿನಗಳನ್ನು ನೆನಪಿಸಿಕೊಂಡ ನಿರ್ಮಾಪಕ ಉದಯ್ ಮೆಹ್ತಾ

Edited By:

Updated on: Sep 29, 2026 | 8:20 PM

‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗಿದ್ದ ಮಾರ್ಟಿನ್ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ಈಗ ತೆಲುಗಿನ ‘ಪ್ಯಾರಡೈಸ್’ ಸಿನಿಮಾ ಕೂಡ ಅದೇ ರೀತಿ ಪರಿಸ್ಥಿತಿ ಎದುರಿಸುತ್ತಿದೆ. ಆ ಬಗ್ಗೆ ಉದಯ್ ಮೆಹ್ತಾ ಮಾತನಾಡಿದ ವಿಡಿಯೋ ಇಲ್ಲಿದೆ.

‘ಮಾರ್ಟಿನ್’ ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ದೊಡ್ಡ ಬಜೆಟ್​ನಲ್ಲಿ ನಿರ್ಮಾಣ ಆಗಿದ್ದ ಮಾರ್ಟಿನ್ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಕಲೆಕ್ಷನ್ ಮಾಡಿರಲಿಲ್ಲ. ಈಗ ತೆಲುಗಿನ ‘ಪ್ಯಾರಡೈಸ್’ ಸಿನಿಮಾ ಕೂಡ ಅದೇ ರೀತಿ ಪರಿಸ್ಥಿತಿ ಎದುರಿಸುತ್ತಿದೆ. ‘ನನ್ನ ಸಿನಿಮಾ ಚೆನ್ನಾಗಿದೆ ಅಂತ ನಾನು ಯಾವತ್ತೂ ಹೇಳಿಲ್ಲ. ನನ್ನ ಸಿನಿಮಾವನ್ನು ಇದುವರೆಗೂ ನಾನು ನೋಡಿಲ್ಲ. ಸಿನಿಮಾ ನೋಡಲು ಹೋಗುತ್ತಿದ್ದ ಜನರನ್ನು ತಡೆದಿದ್ದರು. ಅದರಿಂದ ನನಗೆ ನಷ್ಟ ಆಯಿತು. 18 ವರ್ಷದಲ್ಲಿ ನಾನು 9 ಸಿನಿಮಾ ಮಾಡಿದ್ದೇನೆ. 6 ಸಿನಿಮಾ ಹಿಟ್ ಆಗಿವೆ. ಮೊದಲ ಸಿನಿಮಾ ಮತ್ತು ಕೊನೆಯ ಸಿನಿಮಾದಲ್ಲಿ ತಪ್ಪು ಆಗಿದೆ. ಅದು ನಾವೇ ಮಾಡಿರುವ ತಪ್ಪು. ಅದಕ್ಕೆ ನನಗೆ ರಿಗ್ರೆಟ್ ಇಲ್ಲ. ನಾನಿ ಒಬ್ಬ ನಟ. ಸಿನಿಮಾದ ನಟ ಮಾತನಾಡುವುದಕ್ಕೂ ನಿರ್ಮಾಪಕರು ಮಾತನಾಡುವುದಕ್ಕೂ ವ್ಯತ್ಯಾಸ ಇದೆ. ಪ್ಯಾರಡೈಸ್ ನಿರ್ಮಾಪಕರನ್ನು ಮಾತನಾಡಿಸಿ. ಸೇಮ್ ನನ್ನ ಪರಿಸ್ಥಿತಿಯಲ್ಲೇ ಅವರು ಇದ್ದಾರೆ’ ಎಂದು ಉದಯ್ ಮೆಹ್ತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 29, 2026 08:19 PM
Loading...
Unable to load recommendations.
Follow Us
ಮಂಗಳ ರಾಜಗೋಪಾಲ್​

ಮಂಗಳ ರಾಜಗೋಪಾಲ್​

Read More