ಜಮ್ಮು ಕಾಶ್ಮೀರದಲ್ಲಿ ಪ್ರವಾಹ, ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಜಮ್ಮು ಕಾಶ್ಮೀರದ ಬುಡ್ಗಾಮ್‌ನಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ 12ಕ್ಕೂ ಹೆಚ್ಚು ಅಂಗಡಿಗಳು ಕೊಚ್ಚಿಹೋಗಿವೆ. ರೌದ್ರ ಮಳೆಯ ಅಬ್ಬರಕ್ಕೆ ನದಿಗಳಂತೆ ಹರಿಯುತ್ತಿರುವ ನೀರಿನಲ್ಲಿ ಅಂಗಡಿಗಳು ಕ್ಷಣಾರ್ಧದಲ್ಲಿ ಕುಸಿದು ನದಿಪಾಲಾಗಿವೆ. ಮಾಲೀಕರ ಕಣ್ಣೆದುರೇ ತಮ್ಮ ವ್ಯವಹಾರದ ಕೇಂದ್ರಗಳನ್ನು ಕಳೆದುಕೊಂಡ ಭೀಕರ ದೃಶ್ಯಗಳು ಸೆರೆಯಾಗಿವೆ. ಮಾಲೀಕರು ನೋಡ ನೋಡುತ್ತಿದ್ದಂತೆಯೇ ತಮ್ಮ ವ್ಯಾಪಾರದ ತಾಣಗಳು ಪ್ರವಾಹಕ್ಕೆ ಸಿಲುಕಿ ನಾಶವಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಂಗಡಿಗಳು ಕೊಚ್ಚಿ ಹೋಗುತ್ತಿರುವ ಹೃದಯವಿದ್ರಾವಕ ಮತ್ತು ಭೀಕರ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
ಶ್ರೀನಗರ, ಜುಲೈ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯ ರುದ್ರತಾಂಡವ ಮುಂದುವರೆದಿದೆ. ಪ್ರವಾಹ ಸೃಷ್ಟಿಸಿರುವ ಈ ಮಳೆಯ ಅಬ್ಬರಕ್ಕೆ ಬುಡ್ಗಾಮ್ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಬುಡ್ಗಾಮ್‌ನಲ್ಲಿ 12ಕ್ಕೂ ಹೆಚ್ಚು ಅಂಗಡಿಗಳು ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿಹೋಗಿವೆ. ನದಿಗಳಂತೆ ಭೋರ್ಗರೆಯುವ ನೀರಿನ ಪ್ರವಾಹಕ್ಕೆ ಸಿಲುಕಿ, ಅಂಗಡಿಗಳು ಸಂಪೂರ್ಣವಾಗಿ ಕುಸಿದು ನದಿಪಾಲಾಗಿವೆ.
ಮಾಲೀಕರು ನೋಡ ನೋಡುತ್ತಿದ್ದಂತೆಯೇ ತಮ್ಮ ವ್ಯಾಪಾರದ ತಾಣಗಳು ಪ್ರವಾಹಕ್ಕೆ ಸಿಲುಕಿ ನಾಶವಾಗುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಂಗಡಿಗಳು ಕೊಚ್ಚಿ ಹೋಗುತ್ತಿರುವ ಹೃದಯವಿದ್ರಾವಕ ಮತ್ತು ಭೀಕರ ದೃಶ್ಯಗಳು ಸ್ಥಳೀಯರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಪ್ರಕೃತಿಯ ವಿಕೋಪಕ್ಕೆ ಸಿಲುಕಿ, ಈ ಅಂಗಡಿಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಅಲ್ಲಿನ ಜನರ ಬದುಕಿನ ಮೇಲೆ ಮಳೆ ಗಂಭೀರ ಪರಿಣಾಮ ಬೀರಿದೆ. ಜಮ್ಮು ಕಾಶ್ಮೀರದಾದ್ಯಂತ ಸತತ ಮಳೆಯು ಹಲವು ಪ್ರದೇಶಗಳಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

