ಪ್ರಧಾನಿ ಮೋದಿ ಕಾರ್ಯಾಲಯದ ವಾರ್ಷಿಕ ಖರ್ಚು ಹಾಗೂ ಕೆಲಸಗಾರರ ಸಂಖ್ಯೆ ಬಗ್ಗೆ ಇಲ್ಲಿದೆ ಮಾಹಿತಿ
ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಯ ಆರ್ಟಿಐಗೆ ಪ್ರಧಾನಿ ಕಾರ್ಯಾಲಯ ಮಾಹಿತಿ: ಮಾಹಿತಿ ಹಕ್ಕು ಕಾಯ್ದೆ ಮೂಲಕ ಲಭ್ಯವಾದ ವಿವರದ ಪ್ರಕಾರ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ಒಟ್ಟು ನೌಕರರ ಸಂಖ್ಯೆ 301.
ಪ್ರಧಾನಿ ನಿವಾಸದಲ್ಲಿನ ವಾರ್ಷಿಕ ಬಜೆಟ್ ಬಗ್ಗೆ ಈಗ ಹೊಸ ಸಂಗತಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಯೊಂದು ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಪ್ರಧಾನಿ ನಿವಾಸದ ಎರಡು ಪ್ರಮುಖ ಸಂಗತಿಗಳ ಬಗ್ಗೆ ಮಾಹಿತಿ ಕೇಳಿತ್ತು. ಅದಕ್ಕೆ ಪೂರಕವಾದ ಅಂಶಗಳು ಲಭ್ಯವಾಗಿದ್ದು, ಪ್ರಧಾನಿ ನಿವಾಸದಲ್ಲಿರುವ ಒಟ್ಟಾರೆ ನೌಕರರ ಸಂಖ್ಯೆ ತಿಳಿದುಬಂದಿದೆ. ಜತೆಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ನೀಡಲಾಗಿರುವ ಅನುದಾನದ ವಿವರವೂ ಹೊರಬಿದ್ದಿದ್ದು, ಈ ವಿಚಾರಗಳು ಎಲ್ಲರ ಗಮನ ಸೆಳೆಯುತ್ತಿವೆ.
ಮಾಹಿತಿ ಹಕ್ಕು ಕಾಯ್ದೆ ಮೂಲಕ ಲಭ್ಯವಾದ ವಿವರದ ಪ್ರಕಾರ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ಒಟ್ಟು ನೌಕರರ ಸಂಖ್ಯೆ 301. ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಪ್ರಧಾನಿ ಕಾರ್ಯಾಲಯದಲ್ಲಿ ಇಷ್ಟು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಯ ಆರ್ಟಿಐಗೆ ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
ಇನ್ನು ಯೂನಿಯನ್ ಮಿನಿಸ್ಟ್ರಿ ವೆಬ್ಸೈಟ್ನಲ್ಲಿ ಪ್ರಧಾನಿ ಕಾರ್ಯಾಲಯದ ವಾರ್ಷಿಕ ವೆಚ್ಚದ ವಿವರ ಲಭ್ಯವಿದೆ. ಪ್ರತಿ ವರ್ಷ ಕೇಂದ್ರ ಗೃಹ ಇಲಾಖೆಯಿಂದ ಪ್ರಧಾನಿ ಕಾರ್ಯಾಲಯದ ಖರ್ಚು ವೆಚ್ಚಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ನೀಡಲಾಗಿರುವ ಅನುದಾನದ ಮೊತ್ತ ಎಷ್ಟು ಎಂಬ ವಿವರ ಈ ವಿಡಿಯೋದಲ್ಲಿ ಲಭ್ಯವಿದೆ.
(RTI reveals number of workers in PMO India and here is the annual budget of PM Office)