ಸಂಗೀತಾ ಶೃಂಗೇರಿ ಮಾಡಿದ ತಪ್ಪಿನಿಂದ ಬಿಗ್ ಬಾಸ್ ಮನೆ ಮಂದಿಗೆ ಉಪವಾಸವೇ ಗತಿ
ಸಂಗೀತಾ ಶೃಂಗೇರಿ ಅವರು ಮಾಡಿದ ತಪ್ಪಿನಿಂದ ಅನೇಕ ದಿನಸಿ ವಸ್ತುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ವಿನಯ್ ಗೌಡ, ತುಕಾಲಿ ಸಂತೋಷ್ ಮುಂತಾದವರು ಬೇಸರಗೊಂಡಿದ್ದಾರೆ. ದಿನಸಿ ವಸ್ತು ಕಡಿಮೆ ಇರುವುದರಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಉಪವಾಸವೇ ಗತಿ ಎಂಬಂತಾಗಿದೆ.
ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಎಡವಟ್ಟು. ಇಡೀ ಮನೆಗೆ ಬೇಕಾಗುವ ವಾರದ ದಿನಸಿ ಪಡೆಯಲು ಬಿಗ್ ಬಾಸ್ (Bigg Boss Kannada) ಒಂದು ಟಾಸ್ಕ್ ನೀಡಿದ್ದರು. ಅದರಲ್ಲಿ ಸಂಗೀತಾ ಶೃಂಗೇರಿ ಅವರು ಮಾಡಿರುವ ತಪ್ಪಿನಿಂದ ಅನೇಕ ದಿನಸಿ ವಸ್ತುಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ವಿನಯ್ ಗೌಡ (Vinay Gowda), ತುಕಾಲಿ ಸಂತೋಷ್ ಮುಂತಾದವರು ಬೇಸರಗೊಂಡಿದ್ದಾರೆ. ದಿನಸಿ ವಸ್ತು ಕಡಿಮೆ ಇರುವುದರಿಂದ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಉಪವಾಸವೇ ಗತಿ ಆಗಬಹುದು ಎಂಬ ಅನುಮಾನ ಮೂಡಿದೆ. ಈ ಸಂಚಿಕೆ ಡಿಸೆಂಬರ್ 18ರ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos