ಸಿದ್ದೇಶ್ವರ್ ಹೇಳಿಕೆಗೆ ಶಾಮನೂರು ಆಕ್ರೋಶ; ನನ್ನದು ಬೇಡುವ ಕೈಯಲ್ಲ ಎಂದು ಕಿಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 29, 2024 | 9:41 PM

ಶಾಮನೂರು ಶಿವಶಂಕರಪ್ಪ(Shamanuru Shivashankarappa) ಅಂದರೆ ಕೊಡುಗೈ ದಾನಿ, ನನ್ನದು ಬೇಡುವ ಕೈಯಲ್ಲ. ಆದರೆ, ನನ್ನ ಬಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ್(G.M.Siddeshwara) ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾನೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ, ಮೇ.29: ಶಾಮನೂರು ಶಿವಶಂಕರಪ್ಪ(Shamanuru Shivashankarappa) ಅಂದರೆ ಕೊಡುಗೈ ದಾನಿ, ನನ್ನದು ಬೇಡುವ ಕೈಯಲ್ಲ. ಆದರೆ, ನನ್ನ ಬಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ್(G.M.Siddeshwara) ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾನೆ ಎಂದು ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ‘ಜಿ.ಎಂ.ಸಿದ್ದೇಶ್ವರನಂತಹ ಕಳ್ಳ ಬೇರೆ ಇಲ್ಲ, ಸರ್ಕಾರದ ತೆರಿಗೆ ಹಣ ನುಂಗುತ್ತಾನೆ. ಜಿ.ಎಂ.ಸಿದ್ದೇಶ್ವರ ಒಂದೇ ಖಾತೆಯಿಂದ ಗುಟ್ಕಾ ಮಾರಾಟ ಮಾಡುವುದಿಲ್ಲ. 12 ಖಾತೆಗಳಲ್ಲಿ ಮಾರಾಟ ಮಾಡಿ ಸರ್ಕಾರಕ್ಕೆ ವಾಣಿಜ್ಯ ತೆರಿಗೆ ವಂಚಿಸುತ್ತಾನೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆ. ಇದೇ ವಿಚಾರಕ್ಕೆ ಶಾಮನೂರು ಪರ ಬೆಟ್ಟಿಂಗ್​ ಕಟ್ಟಬೇಡಿ. ಆತ ದುಡ್ಡು ಕೊಡಲ್ಲ ಎಂದು ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ. ನನಗೆ ಕೊಟ್ಟು ಮಾತ್ರ ಗೊತ್ತು. ಬೆಟ್ಟಿಂಗ್ ಬಗ್ಗೆ ಮಾತಾಡಬಾರದು, ಅದು ಅಪರಾಧ ಆಗುತ್ತದೆ ಎನ್ನುತ್ತಲೇ ಜಿ.ಎಂ.ಸಿದ್ದೇಶ್ವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ