ರಾಜಾಜಿನಗರದ ರಾಮಮಂದಿರದ ದೇಗುಲದ ಬಳಿ ಬೃಹತ್ ಶ್ರೀರಾಮ ಮತ್ತು ಆಂಜನೇಯ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರು ಈ ಬೃಹತ್ ಮೂರ್ತಿಯನ್ನು ಉದ್ಘಾಟನೆ ಮಾಡಿದರು. 63 ಅಡಿ ಎತ್ತರದ ರಾಮ, 25 ಅಡಿ ಎತ್ತರದ ಆಂಜನೇಯ ಮೂರ್ತಿ ಇದಾಗಿದ್ದು ಮೂರ್ತಿಗಳನ್ನು ಉದ್ಘಾಟನೆ ಮಾಡಿದ ಶಿವರಾಜ್ ಕುಮಾರ್, ‘ಶ್ರೀರಾಮ್, ಭಜರಂಗಿ ಸಿನಿಮಾಗಳಲ್ಲಿ ನಾನು ನಟಿಸಿದ್ದೀನಿ. ಶ್ರೀರಾಮ ಮತ್ತು ಆಂಜನೇಯನೊಟ್ಟಿಗೆ ಆಧ್ಯಾತ್ಮಿಕ ಸಂಬಂಧ ಇದೆ ಎಂದರು. ರಾಜಾಜಿನಗರದ ಬಗ್ಗೆ ಮಾತನಾಡಿ, ಈ ಏರಿಯಾ ನನಗೆ ಬಹಳ ಹಳೆಯದ್ದು, ಇಲ್ಲಿ ಬಹಳ ಮಂದಿ ಹಳೆಯ ಗೆಳೆಯರು ನನಗೆ ಇದ್ದಾರೆ’ ಎಂದರು. ಬೆಂಗಳೂರಿನಲ್ಲಿ ಸುರಿಯುತ್ತಿರುವ ಸತತ ಮನೆಯ ಬಗ್ಗೆ ಮಾತನಾಡಿ, ‘ಮಳೆ ಒಳ್ಳೆಯದು, ಅದರಿಂದಲೇ ಕಳೆ, ಅದರಿಂದಲೇ ಬೆಳೆ. ಆದರೆ ಜನ ಈ ಸಮಯದಲ್ಲಿ ಎಚ್ಚರಿಕೆಯಿಂದ ಓಡಾಡಬೇಕು’ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:38 pm, Tue, 22 October 24