ಅಭ್ಯರ್ಥಿ ಯಾರೆಂದು ಕಾರ್ಯಕರ್ತರೊಂದಿಗೆ ಚರ್ಚಿಸಲು ಚನ್ನಪಟ್ಟಣಕ್ಕೆ ಹೊರಟ ಶಿವಕುಮಾರ್
ಫಾರ್ ಎ ಚೇಂಜ್ ಚನ್ನಟ್ಟಣ ಕ್ಷೇತ್ರದ ಅಭ್ಯರ್ಥಿ ತಾನೇ ಎಂದು ಶಿವಕುಮಾರ್ ಇವತ್ತು ಹೇಳಲಿಲ್ಲ. ಅವರು ಸ್ಪರ್ಧಿಸುವುದಿಲ್ಲವೆಂದು ಎಲ್ಲರಿಗೂ ಗೊತ್ತು, ಅದರೆ ವಿರೋಧ ಪಕ್ಷದ ನಾಯಕರನ್ನು ಗೊಂದಲದಲ್ಲಿಡಲು ಅವರು ಮಾಧ್ಯಮ ಕೇಳಿದಾಗೆಲ್ಲ ತಾನೇ ಅಭ್ಯರ್ಥಿ ಎನ್ನುತ್ತಿದ್ದರು.
ಬೆಂಗಳೂರು: ಇಂದು ಬೆಳಗ್ಗೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚನ್ನಪಟ್ಟಣದ ಕಡೆ ಹೊರಟರು. ನವೆಂಬರ್ 13 ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು ಪಕ್ಷದ ಕಾರ್ಯಕರ್ತರ ಜೊತೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸುವುದು ರಾಜ್ಯಾಧ್ಯಕ್ಷನಾಗಿ ತಮ್ಮ ಜವಾಬ್ದಾರಿಯಾಗಿದೆ ಎಂದು ಶಿವಕುಮಾರ್ ಹೇಳಿದರು. ಇವತ್ತು ಸಾಯಂಕಾಲ ಅಥವಾ ನಾಳೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸುವ ನಿರೀಕ್ಷೆ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಯೋಗೇಶ್ವರ್ಗೆ ಶಿವಕುಮಾರ್ ಗಾಳ?