ಸಂವಿಧಾನವನ್ನು ಬದಲಿಸುತ್ತೇವೆ ಅಂತ ಶಿವಕುಮಾರ್ ಹೇಳಿಲ್ಲ, ಅವರನ್ನು ಮಿಸ್ಕೋಟ್ ಮಾಡಲಾಗುತ್ತಿದೆ: ಯತೀಂದ್ರ ಸಿದ್ದರಾಮಯ್ಯ
ಬಿಜೆಪಿ ನಾಯಕರು ಸಂವಿಧಾನ ಬದಲಿಸುವ ಮಾತಾಡಿದಾಗೆಲ್ಲ ಕಾಂಗ್ರೆಸ್ ಅದನ್ನು ಪ್ರಶ್ನಿಸಿದ್ದು ಸತ್ಯ, ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ ಅಂತ ಹೇಳಿದ್ದಕ್ಕೆ ನಂತರ ಸ್ಪಷ್ಟನೆ ನೀಡಿಲ್ಲ, ಆದರೆ ನಮ್ಮ ಉಪ ಮುಖ್ಯಮಂತ್ರಿಯವರು ಕೂಡಲೇ ಸ್ಪಷ್ಟನೆ ನೀಡಿದ್ದಾರೆ ಮತ್ತು ತವು ಹೇಳಿದ್ದನ್ನು ಬಿಜೆಪಿ ಮಿಸ್ ಕೋಟ್ ಮಾಡುತ್ತಿದೆ ಎಂದಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮೈಸೂರು, 26 ಮಾರ್ಚ್: ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಇದು ಮೈಸೂರಲ್ಲಿ ಮಾತಾಡುತ್ತಾ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಂವಿಧಾನ ಬದಲಾಯಿಸುತ್ತೇವೆ ಅಂತ ಹೇಳಿಲ್ಲ ಎಂದರು. ಶಿವಕುಮಾರ್ ಇಂಗ್ಲಿಷ್ ಚ್ಯಾನೆಲ್ ಆಯೋಜಿಸಿದ್ದ ಕನ್ಕೇವ್ನಲ್ಲಿ ಭಾಗವಹಿಸಿದ್ದರು, ಇಂಗ್ಲಿಷ್ ಅವರ ಸ್ವಾಭಾವಿಕ ಭಾಷೆ ಅಲ್ಲ, ಹಾಗಾಗಿ ತಾವು ಹೇಳಬೇಕಾಗಿದ್ದನ್ನು ಅವರಿಗೆ ಸರಿಯಾಗಿ ಕನ್ವೇ ಮಾಡಲಾಗಿಲ್ಲ, ಸಂವಿಧಾನವನ್ನು ತಂದಿದ್ದೇ ಕಾಂಗ್ರೆಸ್, ನಾವು ಯಾಕೆ ಅದನ್ನು ಬದಲಾಯಿಸುವ ಮಾತಾಡುತ್ತೇವೆ ಎಂದು ಯತೀಂದ್ರ ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂವಿಧಾನ ಬದಲಿಸುವ ಮಾತಾಡಿದ್ದರೆ ರಾಜಕೀಯದಿಂದ ನಿವೃತ್ತನಾಗ್ತೀನಿ: ಡಿಕೆ ಶಿವಕುಮಾರ್