‘ನಾನೇ ಟಿಕೆಟ್ ಬುಕ್ ಮಾಡಿಕೊಂಡು ಟಾಕ್ಸಿಕ್ ನೋಡಿದೆ’: ಶಿವಣ್ಣ ಫಸ್ಟ್ ರಿಯಾಕ್ಷನ್
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ಶಿವರಾಜ್ಕುಮಾರ್ ಅವರು ನೋಡಿದ್ದಾರೆ. ಸ್ವತಃ ಟಿಕೆಟ್ ಬುಕ್ ಮಾಡಿಕೊಂಡು ಬಂದು ಸಿನಿಮಾ ನೋಡಿರುವುದಾಗಿ ಅವರು ತಿಳಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ತಮ್ಮ ವಿಮರ್ಶೆ ಹಂಚಿಕೊಂಡರು. ಟಾಕ್ಸಿಕ್ ಸಿನಿಮಾ ಬಗ್ಗೆ ಶಿವಣ್ಣ ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾವನ್ನು ಶಿವರಾಜ್ಕುಮಾರ್ ಅವರು ನೋಡಿದ್ದಾರೆ. ಸ್ವತಃ ಟಿಕೆಟ್ ಬುಕ್ ಮಾಡಿಕೊಂಡು ಬಂದು ಸಿನಿಮಾ ನೋಡಿರುವುದಾಗಿ ಅವರು ತಿಳಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಅವರು ತಮ್ಮ ವಿಮರ್ಶೆ ಹಂಚಿಕೊಂಡರು. ಸಿನಿಮಾದಲ್ಲಿ ತಮಗೆ ಇಷ್ಟ ಆದ ಅಂಶಗಳು ಯಾವುವು ಎಂಬುದನ್ನು ಅವರು ವಿವರಿಸಿದರು. ‘ಇದು ಒಂದು ಒಳ್ಳೆಯ ಪ್ರಯತ್ನ. ಸೆಕೆಂಡ್ ಹಾಫ್ ಸಸ್ಪೆನ್ಸ್ ಚೆನ್ನಾಗಿದೆ. ಯಶ್ ಚೆನ್ನಾಗಿ ಕಾಣುತ್ತಿದ್ದಾರೆ. ಯಶ್ ನಮ್ಮ ಹುಡುಗ. ನನಗೆ ನನ್ನ ತಮ್ಮ ಮಾಡಿದಷ್ಟೇ ಖುಷಿ ಆಗುತ್ತದೆ. ಅವರಿಗೆ ನನ್ನ ಬೆಂಬಲ ಯಾವಾಗಲೂ ಇರುತ್ತದೆ. ಬ್ಯುಸಿ ಇದ್ದಿದ್ದರಿಂದ ಇಷ್ಟು ದಿನ ಸಿನಿಮಾ ನೋಡೋಕೆ ಆಗಿರಲಿಲ್ಲ. ನಿನ್ನೆ ನಾನೇ ಟಿಕೆಟ್ ಬುಕ್ ಮಾಡಿಕೊಂಡು ಇಂದು ಸಿನಿಮಾ ನೋಡಿದ್ದೇನೆ. ಶಿವರಾಜ್ಕುಮಾರ್ ಆಗಿ ಅಥವಾ ಒಬ್ಬ ನಟನಾಗಿ ನಾನು ಸಿನಿಮಾ ನೋಡಿಲ್ಲ. ಒಬ್ಬ ಪ್ರೇಕ್ಷಕನಾಗಿ ನಾನು ಸಿನಿಮಾ ನೋಡಿದ್ದೇನೆ’ ಎಂದು ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

